ಉಪ್ಪಳ: ಪ್ರತಾಪನಗರದ ಶಿವಶಕ್ತಿ ಮೈದಾನದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ 42ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ನಿನ್ನೆ ಸಮಾಪ್ತಿ ಗೊಂಡಿತು. ಕಳೆದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೂಜಿಸಿದ ಗಣಪತಿಯ ಶೋಭಾಯಾತ್ರೆ ನಿನ್ನೆ ಸಂಜೆ ಉತ್ಸವಾಂಗಣದಿಂದ ಹೊರಟು ಸೋಂಕಾಲು, ಕೈಕಂಬ, ಐಲ ಮಹಾದ್ವಾರ, ಪಾರಕಟ್ಟೆ ದಾರಿಯಾಗಿ ಐಲ ಶಿವಾಜಿನಗರದ ಸಿಂಧೂ ಮಹಾಸಾಗರದಲ್ಲಿ ವಿಗ್ರಹ ಜಲ ಸ್ತಂಭನ ನಡೆಯಿತು. ಸ್ತಬ್ದ ಚಿತ್ರ, ಕುಣಿತ ಭಜನೆ ಮೊದಲಾದ ಸಾಂಸ್ಕೃತಿಕ ವೈಭವಗಳು ಶೋಭಾಯಾತ್ರೆಗೆ ಮೆರಗನ್ನು ನೀಡಿತು. ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ ಸಮಿತಿ ಐಲ ಶಿವಾಜಿನಗರ ಇವರು ಶೋಭಾಯಾತ್ರೆಗೆ ನೇತೃತ್ವ ನೀಡಿದರು.
