ಏಜೆಂಟ್‌ರ ಮೂಲಕ ಹಣ ಸಂಗ್ರಹ: ಮೋಟಾರು ವಾಹನ ಇಲಾಖೆಯ ಜಿಲ್ಲೆಯ ನಾಲ್ವರು ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ಟ್ರಿಬ್ಯೂನಲ್ ತನಿಖೆ

ಕಾಸರಗೋಡು:  ಡ್ರೈವಿಂಗ್ ಟೆಸ್ಟ್ ಗ್ರಾಂಡ್‌ನ ಏಜೆಂಟರ ಮೂಲಕ ಹಣ ಸಂಗ್ರಹ ಮಾಡಿರುವುದಾಗಿ ವಿಜಿಲೆನ್ಸ್ ಆಂಡ್ ಆಂಟಿ ಕರೆಕ್ಷನ್ ಬ್ಯೂರೋ ನಡೆಸಿದ ತನಿಖೆಯಲ್ಲಿ  ಪತ್ತೆಯಾದ ಹಿನ್ನೆಲೆಯಲ್ಲಿ  ಅದರ ಮುಂದಿನ ತನಿಖೆ ಎಂಬಂತೆ ಹೊಸದುರ್ಗ ಸಬ್ ಆರ್‌ಟಿಒ ಕಚೇರಿಯ  ಮೋಟಾರು ವೆಹಿಕಲ್ ಇನ್‌ಸ್ಪೆಕ್ಟರ್ ಕೆ.ವಿ. ಜಯನ್, ಅಸಿ ಸ್ಟೆಂಟ್ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್‌ಗಳಾದ ಶಾಜಿಲ್ ಕೆ. ರಾಜ್,  ಎಂ.ಜೆ. ಸುಧೀಶ್ ಮತ್ತು ವಿ.ಜೆ. ಶಾಜು ಎಂಬವರ ವಿರುದ್ಧ ಈ ತನಿಖೆ ಆರಂಭಿಸಲಾಗಿದೆ. ಈ ಪೈಕಿ ಶಾಜಿಲ್ ಕೆ ರಾಜ್ ಸರಕಾರಿ ಸೇವೆ ಯಿಂದ ಈಗಾಗಲೇ ನಿವೃತ್ತರಾಗಿದ್ದಾರೆ.

2023 ಎಪ್ರಿಲ್ 27ರಂದು ವಿಜಿಲೆನ್ಸ್ ತಂಡ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಫಿಟ್ನೆಸ್ ಟೆಸ್ಟ್‌ಗಾಗಿ ತಲುಪಿದ ವಾಹನಗಳ ಮಾಲಕರಿಂದ ಏಜೆಂಟರುಗಳನ್ನು ಬಳಸಿ ಹಣಸಂಗ್ರಹ ಮಾಡಿರುವುದಾಗಿ ವಿಜಿಲೆನ್ಸ್ ತಂಡ ಪತ್ತೆಹಚ್ಚಿತ್ತು.  ಈ ವಿಜಿಲೆನ್ಸ್ ಕಾರ್ಯಾಚರಣೆಯಲ್ಲಿ ಹೊಸದುರ್ಗ ಸಬ್ ಆರ್‌ಟಿಒ ಕಚೇ ರಿಯ ಪರಿಸರದಿಂದ ಏಜೆಂಟರೋರ್ವ ನಿಂದ ವಿಜಿಲೆನ್ಸ್ ತಂಡ 56,520 ರೂ.ವನ್ನು ಪತ್ತೆಹಚ್ಚಿ ವಶಪಡಿಸಿಕೊಂ ಡಿತ್ತು. ಫಿಟ್ನೆಸ್ ಟೆಸ್ಟ್ ನಡೆಸುವ ವಾಹನ ಗಳ ಕುರಿತಾದ ಮಾಹಿತಿಗಳನ್ನು ಆ  ಏಜೆಂಟ್‌ನಿಗೆ ವಾಟ್ಸಪ್‌ನಲ್ಲಿ ಮಾಹಿತಿ ಕಳುಹಿಸಿಕೊಟ್ಟಿರುವ ಹಾಗೂ ಹಣ ಸಂಗ್ರಹಿಸಿದ ಮಾಹಿತಿಗಳು ಒಳಗೊಂಡ ಕಾಗದಗಳು ವಿಜಿಲೆನ್ಸ್‌ಗೆ ಅಂದು ಲಭಿಸಿತ್ತು. ಅದರ ಆಧಾರದಲ್ಲಿ ವಿಜಿಲೆನ್ಸ್‌ನ ಕಾಸರಗೋಡು ಘಟಕ ತನಿಖೆ ನಡೆಸಿ ನಂತರ ಅದರ ವರದಿ ಯನ್ನು ರಾಜ್ಯ ವಿಜಿಲೆನ್ಸ್ ನಿರ್ದೇಶಕರಿಗೆ ಸಲ್ಲಿಸಿತ್ತು. ಫಿಟ್ನೆಸ್ ಸರ್ಟಿಫಿಕೇಟ್ ಲಭಿಸಲು ನಿಗದಿತ ಶುಲ್ಕಕ್ಕಿಂತಲೂ ಇಮ್ಮಡಿ ಶುಲ್ಕವನ್ನು  ವಾಹನ ಮಾಲಕ ರಿಂದ ಸಂಗ್ರಹಿಸಲಾಗಿತ್ತೆಂದೂ ವಿಜಿಲೆನ್ಸ್ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿತ್ತು.  ಅದರ ಆಧಾರದಲ್ಲಿ ಆರೋಪಿತರಾದ ಆರ್‌ಟಿಒ ಅಧಿಕಾರಿ ಗಳಿಗೆ ಮೆಮೋ ಜ್ಯಾರಿಗೊಳಿಸಲಾಗಿತ್ತು. ಆದರೆ ತಮ್ಮ ಮೇಲೆ ಹೊರಿಸಲಾದ ಆರೋಪಗಳೆಲ್ಲವನ್ನೂ ನಿರಾಕರಿಸಿ ಆರ್‌ಟಿಒ ಅಧಿಕಾರಿಗಳು ಬಳಿಕ ಅದಕ್ಕೆ ಸ್ಪಷ್ಟೀಕರಣೆ ನೀಡಿದ್ದರು. ಮಾತ್ರವಲ್ಲ ಕಳೆದ ಜುಲೈ ೮ರಂದು ಈ ಅಧಿಕಾರಿಗಳನ್ನು ವಿಜಿಲೆನ್ಸ್ ಡೆಪ್ಯುಟಿ ಕಾರ್ಯದರ್ಶಿಯವರು ತಮ್ಮ ಕಚೇರಿಗೆ ಕರೆಸಿ ಅವರ ಹೇಳಿಕೆಗಳನ್ನು  ದಾಖಲಿಸಿಕೊಂಡಿದ್ದರು. ಆದರೆ ಈ ಆರ್‌ಟಿಒ ಅಧಿಕಾರಿಗಳು ನೀಡಿದ ಹೇಳಿಕೆಗಳನ್ನು ಸಾಬೀತುಪಡಿಸುವ ಅಧಿಕೃತ ದಾಖಲುಪತ್ರಗಳನ್ನು ಸಾಬೀತುಪಡಿಸಲು ಅಂದು ಅವರಿಗೆ ಸಾಧ್ಯವಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ  ಆರೋಪಿತ ಆರ್‌ಟಿಒ ಅಧಿಕಾರಿಗಳ ವಿರುದ್ದ ಕಲ್ಲಿಕೋಟೆ ವಿಜಿಲೆನ್ಸ್ ಟ್ರಿಬ್ಯುನಲ್ ಮೂಲಕ ತನಿಖೆ ನಡೆಸುವ ಆದೇಶವನ್ನು  ಕೊನೆಗೆ ಹೊರಡಿಸಲಾಗಿದೆ.

You cannot copy contents of this page