ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಮನೆಯೊಳಗೆ ಜೀರ್ಣಾವಸ್ಥೆಯಲ್ಲಿ ಪತ್ತೆ

ಕುಂಬಳೆ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತದೇಹ ಜೀರ್ಣಾವಸ್ಥೆಯಲ್ಲಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರಬ ಹುದೆಂದು ಅಂದಾಜಿಸಲಾಗಿದೆ.

ಕುಬಣೂರು ಮೀನಾರ್‌ಪಂಜ ಎಂಬಲ್ಲಿನ ಈಶ್ವರ ಮೂಲ್ಯ (50) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಇವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರೆನ್ನ ಲಾಗಿದೆ. ಕೂಲಿ ಕಾರ್ಮಿಕನಾಗಿದ್ದರು. ಟಿವಿ ಕೇಬಲ್ ಸಂಪರ್ಕ ನೀಡುವ ವ್ಯಕ್ತಿ ಈಶ್ವರ ಮೂಲ್ಯರನ್ನು ಕೆಲಸಕ್ಕೆ ಕರೆಯಲೆಂದು ನಿನ್ನೆ ಅಲ್ಲಿಗೆ ತೆರಳಿದಾಗ ಮನೆಯ ಬಾಗಿಲು ತೆರೆದಿಟ್ಟಿತ್ತು. ಕರೆದರೂ ಯಾವುದೇ ಪ್ರತಿಕ್ರಿಯೆ ಉಂ ಟಾಗಿಲ್ಲ. ಅಲ್ಲದೆ ಮನೆಯೊಳಗಿನಿಂದ ವಾಸನೆ ಬರುತ್ತಿತ್ತೆನ್ನಲಾಗಿದೆ. ಇದರಿಂದ ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಈಶ್ವರ ಮೂಲ್ಯರ ಮೃತದೇಹ ನೆಲದಲ್ಲಿ ಪತ್ತೆಯಾಗಿತ್ತೆನ್ನಲಾಗಿದೆ. ಟಿವಿ ಕೇಬಲ್ ನೌಕರ ಕೂಡಲೇ ವಿಷಯವನ್ನು ಸ್ಥಳೀಯರಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹ ಜೀರ್ಣಾವಸ್ಥೆಯಲ್ಲಿದ್ದು ಇದರಿಂದ ಮೂರು ದಿನಗಳ ಹಿಂದೆಯೇ ವ್ಯಕ್ತಿ ಸಾವನ್ನಪ್ಪಿರಬಹುದೆಂದು ಅಂದಾ ಜಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಮಾಲಿಂಗ ಮೂಲ್ಯ-ಕಮಲ ದಂಪತಿಯ  ಪುತ್ರನಾದ ಮೃತರು ಸಹೋದರ ಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page