ಬದಿಯಡ್ಕ: ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಸಾನ್ವಿ ಡಿ. ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾಳೆ. ಪುತ್ತೂರು ಶಾರದ ಕಲಾ ಕೇಂದ್ರದ ಗುರು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ರ ಶಿಷ್ಯೆಯಾದ ಈಕೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಯಾಗಿದ್ದಾಳೆ. ಈಕೆ ಕುಂಟಿಕ್ಕಾನ ಬಳಿಯ ದೇವರಮೆಟ್ಟು ನಿವಾಸಿಯೂ ಪ್ರಸ್ತುತ ಪುತ್ತೂರು ಕರ್ಮಲದಲ್ಲಿ ವಾಸಿಸುವ ಬಾಲಚಂದ್ರ ಡಿ. ಹಾಗೂ ಅನುಪಮ (ಪುತ್ತೂರು ತಾಲೂಕು ಕಚೇರಿ ಉದ್ಯೋಗಿ) ದಂಪತಿಯ ಪುತ್ರಿ.
