ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚಾರಣೆಯಂಗವಾಗಿ ನಿನ್ನೆ ಬದಿಯಡ್ಕದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಬಿ.ಎನ್., ಗೋಸಾಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ, ನಾಟ್ಯ ವೈದ್ಯ ಗೋವಿಂದ ಭಟ್ ಬೇಂದ್ರೋಡು, ಪ್ರತಿಭಾ ಬದಿಯಡ್ಕ, ನಾರಾಯಣ ಮಣಿಯಾಣಿ ಚೇರ್ಕೂಡ್ಲು, ಹರೀಶ್ ಭಟ್ ಚೇರ್ಕೂಡ್ಲು, ರಂಜನ್ ಕಡಮಣ್ಣಾಯ ಪೆರಡಾಲ, ಮಹೇಶ್ ವಳಕುಂಜ ಉಪಸ್ಥಿತರಿದ್ದರು. ಸಮಿತಿ ವತಿಯಿಂದ ಪಾದ ಪೂಜೆ, ಪಾದುಕ ಪೂಜೆ, ಕಾರ್ತಿಕ ಪೂಜೆ ಜರಗಿತು. ಬದಿಯಡ್ಕ ವ್ಯಾಪಾರಿಗಳು, ದಾನಿಗಳು ಸಹಕರಿಸಿದ್ದರು. ಡಾ| ಶ್ರೀನಿಧಿ ಸರಳಾಯ ನೇತೃತ್ವ ನೀಡಿದರು.
