ಎನ್‌ಆರ್‌ಇಜಿ ಕಾರ್ಮಿಕರಿಂದ ವಿವಿಧ ಅಂಚೆ ಕಚೇರಿಗಳಿಗೆ ಮಾರ್ಚ್

ಪೈವಳಿಕೆ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ಯೂನಿಯನ್ (ಎನ್‌ಆರ್‌ಇಜಿ) ಪೈವಳಿಕೆ ಪಂಚಾ ಯತ್ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ವರ್ಷಕ್ಕೆ 200 ದಿನದ ಕೆಲಸ ನೀಡಬೇಕು, ಭೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದ ಕೇಂದ್ರ ಸರಕಾರದ ನೀತಿ ಹಿಂತೆಗೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ಪಂಚಾಯತ್‌ಗಳಲ್ಲಿ ಮಾರ್ಚ್, ಧರಣಿ ನಡೆಸಲಾಗಿದೆ.

ಪೈವಳಿಕೆ ಪಂಚಾಯತ್‌ನಲ್ಲಿ ಸಿಐಟಿಯು ಮಂಜೇಶ್ವರ ಏರಿಯಾ ಉಪಾಧ್ಯಕ್ಷ ಚಂದ್ರ ನಾಕ್ ಮಾನಿಪ್ಪಾಡಿ ಉದ್ಘಾಟಿಸಿದರು. ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅಬ್ದುಲ್ಲ ಕೆ, ವಾರ್ಡ್ ಪ್ರತಿನಿಧಿ ರಹಮತ್ ರೈಯಾನ್ ಶುಭ ಕೋರಿದರು. ಯೂನಿಯನ್‌ನ ನೇತಾರೆ ಯಶೋಧ ಸುನ್ನಾಡ ಸ್ವಾಗತಿಸಿ, ಶಾಂಭವಿ ಬಾಯಿಕಟ್ಟೆ ವಂದಿಸಿದರು.

ಮೀಂಜ: ಮೀಂಜ ಪಂ.ನಲ್ಲಿ ಮೀಯಪದವು ಅಂಚೆಕಚೇರಿಗೆ ನಡೆದ ಮಾರ್ಚ್  ಹಾಗೂ ಧರಣಿಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾ ಟಿಸಿದರು. ವರ್ಕರ್ಸ್ ಯೂನಿಯನ್ ಏರ್ಯಾ ಸಮಿತಿ ಅಧ್ಯಕ್ಷೆ ಸರಸ್ವತಿ ಎಲಿಯಾಣ ಅಧ್ಯಕ್ಷತೆ ವಹಿಸಿದರು. ಪಂ. ಸದಸ್ಯ ಜನಾರ್ದನ ಪೂಜಾರಿ, ಲೋಕೇಶ್ ಚಿನಾಲ, ಟಿ. ರಾಮಚಂದ್ರ, ಐರಿನ್ ಜೋಸ್ಪಿನ್ ನೇತೃತ್ವ ನೀಡಿದರು.

You cannot copy contents of this page