ಕಾಂಗ್ರೆಸ್‌ನಿಂದ ಗೃಹ ಸಂಪರ್ಕಕ್ಕೆ ಚಾಲನೆ

ಮಂಗಲ್ಪಾಡಿ: ಕೇಂದ್ರ ಸರಕಾರ ಹಾಗೂ ಕೇರಳ ಸರಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಗೃಹ ಸಂದರ್ಶನದಂತೆ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಉದ್ಘಾಟಿಸಿದರು. ಅಶ್ರಫ್ ಮುಟ್ಟಂ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಫಾರೂಕ್ ಶಿರಿಯಾ, ರಾಜೇಶ್, ಗೀತಾ ಬಂದ್ಯೋಡು, ಮುಹಮ್ಮದ್ ಮಲಂದೂರು, ತಾಹಿರಾ, ಜಾವಿದ್, ಸಿದ್ದಿಕ್, ಶಫಿಕ್, ಬಾಬು, ಸುಂದರ, ಮೂಸ, ಇಸ್ಮಾಯಿಲ್, ಮುಹಮ್ಮದ್ ಮೇರ್ಕಳ, ಯೂಸಫ್, ಹನೀಫ್ ಉಪಸ್ಥಿತರಿದ್ದರು. ಅಶ್ರಫ್ ಮುಟ್ಟಂ ಸ್ವಾಗತಿಸಿ, ಲಕ್ಷ್ಮಣ ವಂದಿಸಿದರು.

ಬದಿಯಡ್ಕ: ಮಂಡಲ ಮಟ್ಟದ ಉದ್ಘಾಟನೆಯನ್ನು ಸೇವಾದಳದ ರಾಜ್ಯ ಸಮಿತಿ ಅಧ್ಯಕ್ಷ ರಮೇಶನ್ ಕರುವಚ್ಚೇರಿ, ವಿದ್ಯಾಗಿರಿಯ ಕಾಂಗ್ರೆಸ್ ಕಾರ್ಯಕರ್ತೆ ಲಕ್ಷ್ಮೀ ಅಮ್ಮರ ಮನೆಯಲ್ಲಿ ಉದ್ಘಾಟಿಸಿದರು. ವಾರ್ಡ್ ಕಾಂಗ್ರೆಸ್ ಸಮಿತಿಯ ಕೂಪನ್, ಕರಪತ್ರ ವಿತರಿಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಪಿ.ಜಿ. ಚಂದ್ರಹಾಸ ರೈ, ಗಂಗಾಧರ ಗೋಳಿಯಡ್ಕ, ಖಾದರ್ ಮಾನ್ಯ, ಜಯಶ್ರೀ, ಚಂದ್ರಹಾಸನ್, ರಾಮ ಪಟ್ಟಾಜೆ, ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ದರ್ಬೆತ್ತಡ್ಕ, ರವಿ ಕುಂಟಾಲುಮೂಲೆ, ಸತೀಶ್ ಪೆರುಮುಂಡ, ಕೇಶವ ಬಿ., ಡೆನ್ನಿಸ್ ಡಿ’ಸೋಜ ಮಾತನಾಡಿದರು. ವಾರ್ಡ್ ಸಮಿತಿ ಅಧ್ಯಕ್ಷ ವಿನ್ಸಂಟ್ ಸ್ವಾಗತಿಸಿ, ವಂದಿಸಿದರು.

You cannot copy contents of this page