ಕುಂಬಳೆ: ಟೋಲ್ ಬೂತ್ ಅಪೀಲು ತಿರಸ್ಕರಿಸಿದರೂ ಆರಿಕ್ಕಾಡಿಯಲ್ಲಿ ಹೋರಾಟದ ತೀವ್ರತೆ ಕಡಿಮೆಯಾಗಿಲ್ಲ. ಸಂಚಾರ ಸ್ವಾತಂತ್ರ್ಯ ತಡೆಯುವವರ ವಿರುದ್ಧ ಆರಿಕ್ಕಾಡಿ ಹೆದ್ದಾರಿಯಲ್ಲಿ ಸ್ಥಳೀಯರು ನಿನ್ನೆ ಪ್ರತಿಭಟಿಸಿದರು. ಆರಿಕ್ಕಾಡಿ ಕಡವತ್‌ನಿಂದ ಕುಂಬಳೆ ಪೇಟೆಗೆ, ಕುಂಬಳೆ ಪೇಟೆಯಿಂದ ಆರಿಕ್ಕಾಡಿ ಕಡವತ್‌ಗೆ ತೆರಳಬೇಕಿದ್ದರೆ ಸರ್ವೀಸ್ ರಸ್ತೆ ಇಲ್ಲದಿರುವುದು ಸಮಸ್ಯೆ ಯಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಂತಿಮ ಹಂvಕ್ಕೆ ತಲುಪಿದರೂ ಸರ್ವೀಸ್ ರಸ್ತೆ ನಿರ್ಮಿಸದಿರುವುದರ ಬಗ್ಗೆ ಸ್ಥಳೀಯರು ಪ್ರತಿಭಟಿಸಿದ್ದಾರೆ. ಹಲವು ಕಾಲದಿಂದ ಇಲ್ಲಿನವರು ಸರ್ವೀಸ್ ರಸ್ತೆಗಾಗಿ ಬೇಡಿಕೆ ಮುಂದಿಟ್ಟಿದ್ದರೂ ಇದುವರೆಗೂ ಪ್ರಯೋಜನ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಹೋರಾಟ ತೀವ್ರಗೊಳಿಸಿ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ಆಗ್ರಹಿಸಿದ್ದಾರೆ. ಸಂವಿಧಾನದಲ್ಲಿ ನೀಡಿರುವ ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಲು ನಿಗದಿತ ಟೋಲ್ ಬೂತ್‌ನ ಮೇಲೆ ಮೇಲ್ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಲಾಗಿತ್ತು. ಇಲ್ಲಿ ನಡೆಸಿರುವುದು ಸೂಚನಾ ಮುಷ್ಕರ ಮಾತ್ರವಾಗಿದೆ ಎಂದು ಇದಕ್ಕೆ ಅಧಿಕಾರಿಗಳು ಕಣ್ಣು ತೆರೆಯದಿದ್ದರೆ ತೀವ್ರ ಹೋರಾಟ ನಡೆಸಲಾಗುವುದೆಂದು ಹೋರಾಟಗಾರರು ಮುನ್ನೆಚ್ಚರಿಕೆ ನೀಡಿದ್ದಾರೆ. ರಸ್ತೆ ಕಾಮಗಾರಿ ಪೂರ್ತಿಯಾದರೆ ಆರಿಕ್ಕಾಡಿ ಓಲ್ಡ್ ರಸ್ತೆಯಲ್ಲಿರುವವರು ಕುಂಬಳೆಗೆ ತೆರಳಬೇಕಿದ್ದರೆ ರಾಷ್ಟ್ರೀಯ ಹೆದ್ದಾರಿಯ ಮೇಲೇರಿ ಹೋಗಬೇಕೆಂಬುದು ಈಗಿನ ಅವಸ್ಥೆಯಾಗಿದೆ. ಆದುದರಿಂದ ಹೆದ್ದಾರಿಗೆ ಹತ್ತಲು ಸೌಕರ್ಯ ಏರ್ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
