ಕಾಸರಗೋಡು: ಚಿನ್ನದ ಬೆಲೆ ದಾಖಲೆಯ ಏರಿಕೆ ಮತ್ತೆ ಮುಂದುವರಿದಿದೆ. ನಿನ್ನೆಗಿಂತ ಇಂದು ಒಂದು ಪವನ್ ಚಿನ್ನಕ್ಕೆ ಏಕಾಏಕಿ 1200 ರೂ. ಹೆಚ್ಚಳವುಂಟಾಗಿದೆ. ಈ ಮೂಲಕ ಇಂದು ಒಂದು ಪವನ್‌ಗೆ 76,960 ರೂ.ಗೇರಿದೆ. ಗ್ರಾಂಗೆ 9620 ರೂ. ನಿನ್ನೆ ಒಂದು ಪವನ್ ಚಿನ್ನಕ್ಕೆ 75,760 ರೂಪಾಯಿಗಳಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಮೌಲ್ಯ ಏರಿಕೆಯೇ ಭಾರತದಲ್ಲೂ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆಯೆನ್ನಲಾಗುತ್ತಿದೆ. ಇದು ಗ್ರಾಹಕರಿಗೆ ತೀವ್ರ ಹೊಡೆತವುಂಟುಮಾಡಿದೆ.
