ಕುಂಬಳೆ: ಉಸಿರಾಟ ತೊಂ ದರೆಯಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕರ್ನಾಟಕದ ಮಂಡ್ಯ ನಿವಾಸಿಯೂ ಕಳೆದ ಹಲವು ವರ್ಷಗಳಿಂದ ಕೂಡ್ಲು ಕಾಂತಿಕೆರೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಿವಣ್ಣ-ಪುಷ್ಪ ದಂಪತಿಯ ಏಕೈಕ ಪುತ್ರ ಸತೀಶ (28) ಮೃತಪಟ್ಟ ಯುವಕ. ಇವರು ಕೂಲಿ ಕಾರ್ಮಿ ಕನಾಗಿದ್ದರು. ಹಲವು ಕಾಲದಿಂದ ಇವರಿಗೆ ಉಸಿರಾಟ ತೊಂದರೆ ಕಾಣಿಸುತ್ತಿತ್ತೆನ್ನಲಾಗಿದೆ. ನಿನ್ನೆ ರಾತ್ರಿ ಅಸೌಖ್ಯ ಉಲ್ಭಣಗೊಂಡಿದ್ದು, ಕೂಡಲೇ ಜನರಲ್ ಆಸತ್ರೆಗೆ ತಲುಪಿಸಿದರೂ ಜೀವರಕ್ಷಿಸ ಲಾಗಲಿಲ್ಲ. ಮೃತರು ತಂದೆ,ತಾಯಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
