ಕಣ್ಣೂರು: ಬಾಂಬ್ ನಿರ್ಮಾ ಣದ ವೇಳೆ ಉಗ್ರ ಸ್ಫೋಟ ಉಂಟಾಗಿ ಮನೆಯೊಳಗಿದ್ದ ವ್ಯಕ್ತಿಯೋರ್ವನ ದೇಹ ಛಿದ್ರಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಣ್ಣೂರು ಬಳಿ ನಡೆದಿದೆ.
ಕಣ್ಣೂರಿಗೆ ಸಮೀಪದ ಕಣ್ಣಪುರ ಕಿರಳಯಿಲ್ನ ಬಾಡಿಗೆ ಮನೆಯೊಂ ದರಲ್ಲಿ ಇಂದು ಮುಂಜಾನೆ ೧.೫೧ರ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟ ದಿಂದ ಮನೆ ಸಿಡಿದು ಪೂರ್ಣವಾಗಿ ಕುಸಿದುಬಿದ್ದಿದೆ. ಅದರೊಳಗಿದ್ದ ವ್ಯಕ್ತಿಯ ದೇಹ ಛಿದ್ರಗೊಂಡು ಅವಯವಗಳು ಎಲ್ಲೆಡೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ. ಸ್ಫೋಟ ಅದೆಷ್ಟು ಉಗ್ರವಾಗಿತ್ತೆಂದರೆ ಸಮೀಪದ ಮನೆಗಳ ಗೋಡೆಗಳೂ ಬಿರುಕುಬಿಟ್ಟಿವೆ. ಇದರಲ್ಲಿ ಕೆಲವು ಮನೆಗಳ ಕಿಟಿಕಿ ಬಾಗಿಲಿನ ಗಾಜುಗಳು ಒಡೆದು ಕೆಳಗೆ ಬಿದ್ದಿವೆ.
ಸ್ಫೋಟ ನಡೆದ ಮನೆಯೊಳಗೆ ಸಿಡಿಯದ ಇನ್ನೊಂದು ಬಾಂಬ್ ಹಾಗೂ ಬಾಂಬ್ ನಿರ್ಮಿಸುವ ಸಾಮಗ್ರಿಗಳೂ ಪತ್ತೆಯಾಗಿವ.
ಸ್ಫೋಟದ ಭೀಕರ ಶಬ್ದದಿಂದ ಒಮ್ಮೆಲೇ ಭಯಭೀತರಾಗಿ ನಾವು ಹೊರಕ್ಕೆ ಬಂದು ನೋಡಿದಾಗ ಪಕ್ಕದ ಮನೆ ಕುಸಿದುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲಿಗೆ ಹೋಗಿ ನೋಡಿದಾಗ ವ್ಯಕ್ತಿಯೋ ರ್ವನ ಮೃತದೇಹ ಛಿದ್ರಗೊಂಡು ಅವಯವಗಳು ಎಲಡೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವ ಅತೀ ಭೀಕರ ದೃಶ ಗೋಚರಿಸಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ಇಬ್ಬರು ಈ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ರಾತ್ರಿ ವೇಳೆಯಲ್ಲಿ ಮಾತ್ರವೇ ಮನೆಗೆ ಬರುತ್ತಿದ್ದಾರೆ. ಅನೂಪ್ ಎಂಬಾತ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದನೆಂದು ನೆರೆಮನೆ ನಿವಾಸಿಗಳು ತಿಳಿಸಿದ್ದಾರೆ.
ಸ್ಫೋಟ ನಡೆದಾಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಕುರಿತಾಗಿ ಸಮಗ್ರ ತನಿಖ ಆರಂಭಿ ಸಲಾಗಿದ. ಅಗ್ನಿಶಾಮಕದಳ ಕೂಡಾ ಸ್ಥಳಕ್ಕೆ ತಲುಪಿದೆ. ಸ್ಫೋಟದಲ್ಲಿ ಸಾವ ನ್ನಪ್ಪಿದ ವ್ಯಕ್ತಿ ಕಣ್ಣೂರು ಮಾಟ್ಟೂಲ್ ನಿವಾಸಿಯಾಗಿದ್ದಾನೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಣ್ಣೂರಿನ ಮನೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ ಅನೂಪ್ ಮಾಲೀಕ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಫೋಟಕ ವಸ್ತು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಉತ್ಸವವೇಳೆ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಾಮಗ್ರಿಗಳನ್ನು ಪೂರೈಸುವ ವ್ಯಕ್ತಿಯಾಗಿದ್ದಾನೆ ಅನೂಪ್. ಈ ಸ್ಪೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿ ಈತನ ಕೈ ಕೆಳಗೆ ದುಡಿಯುತ್ತಿರುವ ಕಾರ್ಮಿಕನಾಗಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. 2016ರಲ್ಲಿ ಕಣ್ಣೂರು ಪೊಡಿಕುನ್ನಿನ ಮನೆಯೊಂದರಲ್ಲಿ ಸ್ಫೋಟಕ ವಸ್ತು ಸಿಡಿದು ಹಾನಿ ಉಂಟಾದ ಪ್ರಕರಣದಲ್ಲೂ ಅನೂಪ್ ಮಾಲೀಕ್ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.