ಲೈಂಗಿಕ ಕಿರುಕುಳಕ್ಕೆಡೆಯಾದ ಯುವತಿ ಗರ್ಭಿಣಿ: ಮೂರು ಮಂದಿ ವಿರುದ್ಧ ಅತ್ಯಾಚಾರಕ್ಕೆ ಕೇಸು

ಕಾಸರಗೋಡು:  ಮೂರು ಮಂದಿಯಿಂದ ಲೈಂಗಿಕ ಕಿರುಕುಳಕ್ಕೆಡೆಯಾದ ಯುವತಿ ಒಂಭತ್ತು ತಿಂಗಳ ಗರ್ಭಿಣಿಯಾದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ  ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪುರುಷು, ಬದ್ರುದ್ದೀನ್, ರಾಘವನ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅವರನ್ನು ಪತ್ತೆಹಚ್ಚಲಿರುವ ಕ್ರಮ ಆರಂಭಿಸಿ ರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ೩೦ರ ಹರೆಯದ ಯುವತಿ ದೂರುದಾತೆಯಾಗಿದ್ದಾಳೆ. ಈಕೆ ವಿವಾಹಿತೆಯಾಗಿದ್ದರೂ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾಳೆನ್ನಲಾಗಿದೆ.

ಒಂಭತ್ತು ತಿಂಗಳ ಗರ್ಭಿಣಿ ಯಾದರೂ ಆ ಬಗ್ಗೆ ಯಾರಿಗೂ ತಿಳಿದುಬಂದಿಲ್ಲ. ಈ ಮಧ್ಯೆ  ಯುವತಿ ಗರ್ಭಿಣಿಯಾದ ವಿಷಯ ಕುಟುಂಬಶ್ರೀ ಕಾರ್ಯ ಕರ್ತೆಯರ ಗಮನಕ್ಕೆ ಬಂದಿತ್ತು. ಅನಂತರ ಮೇಲ್ಪ ರಂಬ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು.

ಮೂರು ಮಂದಿ ತನ್ನ ಗರ್ಭಕ್ಕೆ ಹೊಣೆಯಾಗಿದ್ದಾರೆ. ಆದರೆ ಯಾರಿಂದ ಗರ್ಭ ಧರಿಸಿರುವುದೆಂದು ತಿಳಿದುಬಂದಿಲ್ಲವೆಂದು ಯುವತಿ ಹೇಳಿಕೆ ನೀಡಿದ್ದಾಳೆ. ಆರೋಪಿಗಳನ್ನು ಪತ್ತೆಹಚ್ಚಬೇಕಾದರೆ ಸಮಗ್ರವಾಗಿ ಹೇಳಿಕೆ ದಾಖಲಿಸಬೇಕಾಗಿದೆಯೆಂದು  ಪೊಲೀಸ್ ಮೂಲಗಳು ತಿಳಿಸಿವೆ.

RELATED NEWS

You cannot copy contents of this page