ಕಾಸರಗೋಡು: ನಗರದ ಹಳೆಯ ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಸಿಗ್ನಲ್ ಆಧುನಿಕ ರೀತಿಯಲ್ಲಿ ಪರಿಷ್ಕರಿಸುವುದಾಗಿ ನಗರಸಭಾ ಚೆಯರ್‌ಮೆನ್ ಅಬ್ಬಾಸ್ ಬೀಗಂ ತಿಳಿಸಿದ್ದಾರೆ. ಎ.ಐ. ಕ್ಯಾಮರಾಗಳ ಸಹಿತ ನೂತನ ತಾಂತ್ರಿಕ ವಿದ್ಯೆಗಳನ್ನು ಬಳಸಿಕೊಂಡು ಆಟೋಮ್ಯಾಟಿಕ್ ಸಿಗ್ನಲ್ ಸಿಸ್ಟಂ ಏರ್ಪಡಿಸಲಾಗುವುದು. ಪ್ರಸ್ತುತ ರಸ್ತೆಯ ಮಧ್ಯದಲ್ಲಿರುವ ಸಿಗ್ನಲ್ ಪೋಸ್ಟ್ ತೆರವುಗೊಳಿಸಲಾಗುವುದು. ಮೈಂಟನೆನ್ಸ್ ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದೆ. ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕೆಲಸವನ್ನು ಕೆಲ್ಟ್ರೋನ್ ವಹಿಸಿಕೊಂಡಿದೆ ಎಂದು ಅಬ್ಬಾಸ್ ಬೀಗಂ ತಿಳಿಸಿದ್ದಾರೆ.
