ಕುಂಬಳೆ: ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಲು, ಔಷಧಿಗಳನ್ನು ಖರೀದಿಸಲು ಬರುವವರ ವಾಹನಗಳಲ್ಲಿ ದಂಡ ನೋಟೀಸ್ ಲಗತ್ತಿಸುತ್ತಾರೆ. ಟ್ರಾಫಿಕ್ ಪರಿಷ್ಕಾರ ದಂಗವಾಗಿ ಕುಂಬಳೆ ಪೇಟೆಯಲ್ಲಿ ಅಧಿಕಾರಿಗಳು ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಸ್ಥಾಪಿಸಿಲ್ಲ. ಅಂಗಡಿಗಳ ಮುಂದೆ ವಾಹನಗಳನ್ನು ನಿಲುಗಡೆಗೊಳಿಸುವು ದರಿಂದಾಗಿ ಯಾವುದೇ ರೀತಿಯ ಸಾರಿಗೆ ತಡೆ ಉಂಟಾಗುತ್ತಿರುವುದಾಗಿ ವ್ಯಾಪಾರಿಗಳು ಕೂಡಾ ದೂರು ನೀಡಿಲ್ಲ. ಪೇಟೆಯ ವಿವಿಧ ಭಾಗಗಳಲ್ಲಿ ವಾಹನಗಳ ಸಹಿತ ತಲುಪುವವರಿಗೆ ಹೈವೇ ಪೊಲೀಸ್ ಸೇರಿದಂತೆ ತೊಂದರೆ ನೀಡುತ್ತಿರುವುದಾಗಿ ದೂರಲಾಗುತ್ತಿದೆ.
ಹೆದ್ದಾರಿಯ ಅಂಡರ್ ಪಾಸ್‌ಗಳಲ್ಲಿ ಸಹಿತ ಕಾನೂನು ವಿರುದ್ಧವಾಗಿ ವಾಹನ ತಪಾಸಣೆ ನಡೆಸುತ್ತಿರುವುದು ನಿತ್ಯ ಘಟನೆಯಾಗಿದೆ. ಇದೇ ವೇಳೆ ಪೊಲೀಸ್ ಹಾಗೂ ಮಾಫಿಯಾ ಮಧ್ಯೆ ಗೆಳೆತನ ಇದೆ ಎಂದು ಕೇಶವ ನಾಯ್ಕ್ ಆರೋಪಿಸಿದರು. ಮಣ್ಣು ಸಾಗಾಟ ಮಾಫಿಯಾಗಳ ವಿರುದ್ಧ ಹಲವಾರು ಬಾರಿ ದೂರು ನೀಡಿದರೂ ಅವರ ವಿರುದ್ಧ ಕಾನೂನು ಕ್ರಮ ಸ್ವೀಕರಿಸಲು ಸಿದ್ಧರಾಗದ ಕುಂಬಳೆ ಪೊಲೀಸರು ವಾಹನ ಮಾಲಕರಿಗೆ ದ್ರೋಹ ನೀಡುತ್ತಿ ರುವುದಾಗಿ ಅವರು ಆಪಾದಿಸಿದರು.
ಅನಂತಪುರ ಕೈಗಾರಿಕಾ ಪಾರ್ಕ್ ಸಮೀಪ, ಪೈವಳಿಕೆ ಬಾಯಾರ್‌ಪದವು ಪ್ರದೇಶದಿಂದ ಗುಡ್ಡೆ ಕೊರೆದು ಮಣ್ಣನ್ನು ವ್ಯಾಪಕವಾಗಿ ಸಾಗಿಸಲಾಗುತ್ತಿದೆ. ದಿನಂಪ್ರತಿ ೩೦ರಷ್ಟು ಲೋಡ್ ಮಣ್ಣು ಇಲ್ಲಿಂದ ರಾಜ್ಯದ ಇತರ ಸ್ಥಳಗಳಿಗೆ ಸಾಗಾಟ ನಡೆಸಲಾಗುತ್ತಿದೆ. ಈ ರೀತಿಯ ಮಾಫಿಯಾಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು, ಇಲ್ಲದಿದ್ದರೆ ರಾಜ್ಯ ಪೊಲೀಸ್ ಅಧಿಕಾರಿ ಸಹಿತದ ಉನ್ನತ ಅಧಿಕಾರಿಗಳಿಗೆ ದೂರು ನೀಡುವುದಾಗಿ ಕೇಶವ ನಾಯ್ಕ್ ತಿಳಿಸಿದ್ದಾರೆ.