ಬಿ.ವಿ. ನಾರಾಯಣ ಭಟ್ ಕುಂಚಿನಡ್ಕ ನಿಧನ

ಪೆರ್ಲ: ಕಾಟುಕುಕ್ಕೆ ಸಮೀಪ ಕುಂಚಿನಡ್ಕ ನಿವಾಸಿ ಬಿ.ವಿ. ನಾರಾಯಣ ಭಟ್ (77) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಮ್ಮ ನಿವಾಸದಲ್ಲೇ ನಿರಂತರವಾಗಿ 350ಕ್ಕೂ ಹೆಚ್ಚು ರಾಮಾಯಣ ಪಾರಾಯಣ ಮಾಡಿದ್ದ ಇವರಿಗೆ ಶ್ರೀರಾಮ ಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ರಾಮಾಯಣ ಸಿದ್ಧ ಎಂಬ ಬಿರುದು ನೀಡಿ ಗೌರವಿಸಿದ್ದರು. 300ಕ್ಕೂ ಹೆಚ್ಚು ಭಾಗವತ ರಾಮಾಯಣ ಮಾಡಿರುತ್ತಾರೆ. ಅಳಿಕೆ ಶ್ರೀ ಸತ್ಯಸಾಯಿ ವಿಹಾರ ಕಾಲೇಜಿನ ನಿವೃತ್ತ ಉದ್ಯೋಗಿ ಎಣ್ಮಕಜೆ ಹವ್ಯಕ ವಲಯದ ಹಲವು ಮನೆಗಳ ಗುರಿಕ್ಕಾರ, ಉತ್ತಮ ಸಮಾಜ ಸೇವಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ವಿಭಾಗಗಳ ಮುಂದಾಳು ಕೂಡಾ ಆಗಿದ್ದರು. ಮೃತರು ಪತ್ನಿ ವೈಶಾಲಿ ಕೆ.ಎನ್. ಭಟ್, ಮಕ್ಕಳಾದ ಅವಿನಾಶ್ ಎನ್. ಭಟ್ (ಆಸ್ಟ್ರೇಲಿಯ), ಅಭಿಲಾಶ್ ಎನ್. ಭಟ್ (ಆಸ್ಟ್ರೇಲಿ ಯ), ಅಳಿಯ ಕೇಶವ ಪ್ರಸಾದ್ ನೆಲ್ಲಿಕಳೆಯ (ಪೆರ್ಲ ಎಸ್‌ಎನ್ ಎಚ್‌ಎಸ್ ಮುಖ್ಯ ಶಿಕ್ಷಕ), ಸೊಸೆಯಂದಿರು ಶ್ರುತಿ ಭಟ್, ರಾಜಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಪರಿಷತ್, ಕಾಸರಗೋಡಿನ ಕನ್ನಡಿಗರ ಸಂಘಟನೆ ಸಂತಾಪ ಸೂಚಿಸಿದೆ.

RELATED NEWS

You cannot copy contents of this page