ಕುಂಬ್ಡಾಜೆ: ಕೇರಳ ಅಭಿವೃದ್ಧಿಯಲ್ಲಿ ಅಲ್ಲ ಬೆಲೆಯೇರಿಕೆಯಲ್ಲಿ ಒಂದನೇ ಸ್ಥಾನದಲ್ಲಿದೆ ಎಂದು, ೧೦ ವರ್ಷದ ಆಡಳಿತದಲ್ಲಿ ಕೇರಳವನ್ನು ಭಾರೀ ಸಾಲದ ಕೂಪಕ್ಕೆ ತಳ್ಳಿದುದಾಗಿದೆ ಪಿಣರಾಯಿ ವಿಜಯನ್‌ರ ಕೊಡುಗೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕುಂಬ್ಡಾಜೆ ಪಂಚಾ ಯತ್ ನಾಲ್ಕನೇ ವಾರ್ಡ್ ಸಮ್ಮೇಳನ ಏತಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತೆಂಗಿನ ಮರಗಳು ತುಂಬಿ ತುಳುಕುವ ಕೇರಳದಲ್ಲಿ ತೆಂಗಿನಕಾಯಿಯ ಬೆಲೆ ಜನಸಾಮಾ ನ್ಯರಿಗೆ ಸಹಿಸಿಕೊಳ್ಳುವು ದಕ್ಕಿಂತಲೂ ಹೆಚ್ಚಾಯಿತು. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳೀಯರು ಸಂಕಷ್ಟಕ್ಕೀ ಡಾಗಿ ರುವುದಾಗಿ ಅವರು ದೂರಿದರು. ನವ ಕೇರಳ ಸದಸ್ ಮಾದರಿಯಲ್ಲಿ ಸೆಪ್ಟೆಂಬರ್‌ನಲ್ಲಿ ಅಭಿವೃದ್ಧಿ ಸದಸ್ ಆಯೋಜಿಸುತ್ತಿರುವುದು ಸ್ಥಳೀಯಾ ಡಳಿತ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಬೇಕಾಗಿ ಜನರ ತೆರಿಗೆ ಹಣವನ್ನು ಉಪಯೋಗಿಸಿ ರಾಜಕೀಯ ಪ್ರಚಾರ ನಡೆಸಲೆಂದು ಅವರು ಆರೋಪಿಸಿದರು.
ಮಂಡಲ ಉಪಾಧ್ಯಕ್ಷ ಕೃಷ್ಣ ಶರ್ಮ ಕಳೆದ ಐದು ವರ್ಷದ ಚಟುವಟಿಕೆಗಳ ವರದಿ ಮಂಡಿಸಿದರು. ವಾರ್ಡ್ ಕನ್ವೀನರ್ ರಾಮಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ., ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೇಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಜಿಲ್ಲಾ ಪಂ. ಸದಸ್ಯೆ ಎಂ. ಶೈಲಜಾ ಭಟ್ ಮಾತನಾಡಿದರು.







