ಜಿಲ್ಲಾ ಭೂಹಕ್ಕುಪತ್ರ ವಿತರಣೆ ಸಚಿವರಿಂದ ಚಾಲನೆ

ಕಾಸರಗೋಡು: ಎಲ್ಲರಿಗೂ ಜಮೀನು, ಎಲ್ಲರಿಗೂ ಭೂದಾಖಲುಪತ್ರ ಹಾಗೂ ಎಲ್ಲಾ ಸೇವೆಗಳೂ ಸ್ಮಾರ್ಟ್ ಎಂಬ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಜ್ಯಾರಿಗೊಳಿಸುವ ಸಲುವಾಗಿ ಆರಂಭಿಸಲಾದ ಭೂಹಕ್ಕುಪತ್ರ ವಿತರಣಾ ಕಾರ್ಯಕ್ರಮದಂತೆ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಸರಗೋಡು ಟೌನ್ ಹಾಲ್‌ನಲ್ಲಿ  ಇಂದು ಬೆಳಿಗ್ಗೆ ಆರಂಭಗೊಂಡಿತು. ರಾಜ್ಯ ಕಂದಾಯ ಖಾತೆ ಸಚಿವ  ಕೆ. ರಾಜನ್ ಉದ್ಘಾಟಿಸಿದರು. ಮಾತ್ರವಲ್ಲ ಜಿಲ್ಲೆಯಲ್ಲಿ ಅರ್ಹರಾದ 1497 ಮಂದಿಗೆ ಭೂಹಕ್ಕು ಪತ್ರಗಳ ವಿತರಣೆಗೆ ಸಚಿವರು  ಚಾಲನೆ ನೀಡಿದರು.  ಕಡು ಬಡವರಿಲ್ಲದ ಕೇರಳ ಯೋಜನೆಯಲ್ಲಿ ಒಳಗೊಂಡವರೂ ಭೂಹಕ್ಕುಪತ್ರ ಪಡೆಯುವವರಲ್ಲಿ ಒಳಗೊಂಡಿದ್ದಾರೆ. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಇ ಚಂದ್ರಶೇಖರನ್, ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿ ಶುಭಾಶಂಸನೆಗೈದರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್  ಸ್ವಾಗತಿಸಿದರು.

RELATED NEWS

You cannot copy contents of this page