ಕುಂಬಳೆಯಲ್ಲಿ ಶಾಲಾ ಅಧಿಕಾರಿಗಳು ತಿಳಿಯದೆ ಮೈದಾನ ಅಳೆದು ಕಲ್ಲುಗಳನ್ನಿರಿಸಿರುವುದಾಗಿ ಆರೋಪ

ಕುಂಬಳೆ: ಹಲವು ವರ್ಷಗಳಿಂದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಜಿಎಸ್‌ಬಿಎಸ್‌ನ ಮಕ್ಕಳು ಆಟವಾಡುವ ಮೈದಾನದ ಒಂದು ಭಾಗವನ್ನು ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಯಾರಿಗೂ ತಿಳಿಯದಂತೆ ಅಳೆದು ಕಲ್ಲುಗಳನ್ನಿರಿಸಿರುವುದು ಕುಂಬಳೆಯಲ್ಲಿ ಚರ್ಚೆಗೆಡೆಯಾಗಿದೆ. ಕಳೆದ ಶುಕ್ರವಾರ ಮಧ್ಯಾಹ್ನ ವೇಳೆ ಅಧಿಕಾರಿಗಳು ತಲುಪಿ ಕಲ್ಲುಗಳನ್ನಿರಿಸಿರುವುದಾಗಿ ಹೇಳಲಾಗು ತ್ತಿದೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ರೆಸ್ಟ್ ಹೌಸ್ ಭಾಗದಿಂದ ಮೈದಾನವಾಗಿ ಉಪಯೋಗಿಸುತ್ತಿದ್ದ ಸ್ಥಳವನ್ನು ಅಳತೆ ಮಾಡಿ ಕಲ್ಲುಗಳನ್ನಿರಿಸಲಾಗಿದೆ.

ಇದೇ ವೇಳೆ ಶಾಲಾ ಮಕ್ಕಳು ಆಟವಾಡುವ ಮೈದಾನದಿಂದ ಒಂದಿಂಚು ಸ್ಥಳ ಕೂಡಾ ನಷ್ಟಗೊಳ್ಳಲು ಬಿಡಲಾಗುವುದಿಲ್ಲವೆಂದು ಕುಂಬಳೆ ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ತಿಳಿಸಿದ್ದಾರೆ.

RELATED NEWS

You cannot copy contents of this page