ಕಲ್ಲಿಕೋಟೆ:? ರಾಜ್ಯದಲ್ಲಿ ಮೆದುಳುಜ್ವರ (ಅಮೀಬಿಕ್ ಜ್ವರ) ಇನ್ನಷ್ಟು ವ್ಯಾಪಿಸತೊಡಗಿದ್ದು ಅದರ ಪರಿಣಾಮ ಚಿಕಿತ್ಸೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಕಲ್ಲಿಕೋಟೆ ಒಮಶ್ಶೇರಿ ನಿವಾಸಿ ದಂಪತಿಯ ಮೂರು ತಿಂಗಳ ಹಸುಗೂಸು ಹಾಗೂ ಮಲಪ್ಪುರಂ ಕಣ್ಣಮಂಗಲಂ ಚೇರೂರು ಕಾಪ್ಪಿಲ್ ಕಣ್ಣೋತ್ ರಮ್ಲ (52) ಎಂಬವರು ಈ ಜ್ವರಕ್ಕೆ ಬಲಿಯಾದವರಾಗಿದ್ದಾರೆ. ಇವರಿ ಬ್ಬರನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇ ಜು ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಇದ ರಲ್ಲಿ ಹಸುಗೂಸನ್ನು ಕಳೆದ 28 ದಿನ ಗಳಿಂದ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾವಿ ನೀರಿನಿಂದ ಮಗುವಿಗೆ ಜ್ವರ ತಗಲಿ ಕೊಂಡಿದೆ ಎಂಬ ಪ್ರಾಥಮಿಕ ನಿಗಮ ನಕ್ಕೆ ವೈದ್ಯರು ಬಂದಿದ್ದಾರೆ. ಆ ಬಾವಿಯ ನೀರಿನ ಸ್ಯಾಂಪಲ್‌ನ್ನು ಪ್ರಯೋಗಾ ಲಯದಲ್ಲಿ ಪರಿಶೀಲಿಸಿದಾಗ ಅದರಲ್ಲಿ ಮೆದುಳು ಜ್ವರಕ್ಕೆ ಕಾರಣವಾಗುವ ಅಮೀಬಾ ರೋಗಾಣು ಪತ್ತೆಯಾಗಿವೆ.
ಇದೇ ವೇಳೆ ಜ್ವರ ತಗಲಿದ ರಮ್ಲಾ ಕಳೆದ ಒಂದೂವರೆ ತಿಂಗಳಿಂದ ಚಿಕಿತ್ಸೆಯಲ್ಲಿದ್ದರು. ಕಳೆದ ಜುಲೈಯಲ್ಲಿ ಅವರಿಗೆ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾದಾಗ ಅವರನ್ನು ಅಲ್ಲಿಂದ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ ದರೂ ಅದು ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ. ಅಮೀಬಿಕ್ ಮೆದುಳು ಜ್ವರಕ್ಕೆ ಕಳೆದ ಒಂದು ತಿಂ ಗಳಲ್ಲಿ ರಾಜ್ಯದಲ್ಲಿ ನಾಲ್ಕು ಮಂದಿ ಸಾವ ನ್ನಪ್ಪಿದ್ದಾರೆ. ಇದು ಒಂದು ಸಾಂಕ್ರಾಮಿಕ ರೋಗವಲ್ಲ. ಕಟ್ಟಿನಿಂತ ನೀರಿನಲ್ಲಿ ಸ್ನಾನ ಮಾಡಿದಲ್ಲಿ ಅಥವಾ ಈಜಿದಲ್ಲಿ ಅಪೂರ್ವವಾಗಿ ಹರಡುವ ಒಂದು ರೋಗವಾಗಿದೆ. ಇದು ಅಮೀಬಿಕ್ ಮೆದುಳುಜ್ವರ ಮೆದುಳಿಗೆ ಬಾಧಿಸುವ ಒಂದುರೋಗವಾಗಿದೆ. ಮೆದುಳುಜ್ವರ ವ್ಯಾಪಿಸುತ್ತಿರುವಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯದಾದ್ಯಂತ ಜಾಗ್ರತಾ ನಿರ್ದೇಶ ನೀಡಿದೆ.