ಕೇರಳದಲ್ಲಿ ತೃತೀಯ ಬಾರಿ ಎಡರಂಗ ಜಯಭೇರಿ ಬಾರಿಸಲಿದೆ- ಎಂ.ವಿ. ಜಯರಾಜನ್

ಪೈವಳಿಕೆ: ಪೈವಳಿಕೆಯ ಶೆಟ್ಟಿ ಸಹೋದರರ 68ನೇ ಹುತಾತ್ಮ ದಿನಾಚರಣೆಯನ್ನು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿಸಿದರು. ಅವರು ಮಾತನಾಡಿ, ಕೇರಳ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿಗೆ ಸೇರುತ್ತಿದೆ ಮಾತ್ರವಲ್ಲ ಶಿಕ್ಷಣರಂಗ, ಆರೋಗ್ಯರಂಗದಲ್ಲಿ ವಿಶ್ವಕ್ಕೇ ಮಾದರಿಯಾಗುತ್ತಿದೆ. ಪ್ರತೀ ತಿಂಗಳು ವಿವಿಧ ಪಿಂಚಣಿಗಳಿಗಾಗಿ 900 ಕೋಟಿ ರೂ. ವೆಚ್ಚ ಮಾಡುತ್ತಿದೆ. ಆರೋಗ್ಯರಂಗದಲ್ಲಿ ಕೇಂದ್ರ ಸರಕಾರದ 36 ಅಂಗೀಕಾರ ರಾಜ್ಯಕ್ಕೆ ದೊರಕಿದೆ. ವಯನಾಡಿನಲ್ಲಿ ಪ್ರಾರಂಭಿಸಲಾದ ರೈಲು ಸುರಂಗ ಮಾರ್ಗ ಭಾರತದ 3ನೇ ಅತೀ ಉದ್ದದ ಹಾಗೂ ಪ್ರಥಮ ದ್ವಿಮುಖ ಮಾರ್ಗ ವಾಗಿದೆ. ತ್ರಿಸ್ತರ ಪಂಚಾಯತ್‌ಗಳ ಮುಖಾಂತರ ನಡೆಯುತ್ತಿರುವ ಅಭಿವೃದ್ಧಿಯು ಭಾರತದ ಇತರ ರಾಜ್ಯಗಳಿಗೆ ಮಾದರಿ ಎಂದು ಅವರು ನುಡಿದರು. ವಿ.ವಿ. ರಮೇಶ್ ಅಧ್ಯಕ್ಷತೆ ವಹಿಸಿದರು. ಕೆ.ಆರ್. ಜಯಾನಂದ ಮಾತನಾಡಿದರು. ಮೆರವಣಿಗೆಗೆ ಚಂದ್ರ ನಾಯ್ಕ್, ಅಶೋಕ ಭಂಡಾರಿ,  ಬೇಬಿ ಶೆಟ್ಟಿ, ಹಾರಿಸ್ ಪೈವಳಿಕೆ, ಪುರುಷೋತ್ತಮ ಬಳ್ಳೂರು, ಬಾಬು ರೈ ನೇತೃತ್ವ ನೀಡಿದರು.

You cannot copy contents of this page