ಮತ ಕಳ್ಳತನ ಆರೋಪಿಸಿ ರಾಹುಲ್ ಗಾಂಧಿ ಯಾತ್ರಾ: ಬಂದ್ಯೋಡ್‌ನಲ್ಲಿ ಬೆಂಬಲ ಮೆರವಣಿಗೆ

ಬಂದ್ಯೋಡು: ಮತ ಕಳ್ಳತನ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ‘ವೋಟರ್ ಅಧಿಕಾರ್ ಯಾತ್ರಾ’ದ ಸಮಾರೋಪದಂಗವಾಗಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಬಂದ್ಯೋಡ್‌ನಲ್ಲಿ ಬೆಂಬಲ ಸೂಚಕ ಮೆರವಣಿಗೆ ನಡೆಯಿತು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಉದ್ಘಾಟಿಸಿ ಮಾತನಾಡಿ, ಅರ್ಹ ಮತದಾರರನ್ನು  ಅಂತಿಮ ಮತದಾರರ ಪಟ್ಟಿಯಿಂದ ಹೊರತುಪಡಿಸಿ ವಿಪಕ್ಷಗಳ ಬಲ ಕುಗ್ಗಿಸಿ ವಾಮ ಮಾರ್ಗಗಳ ಮೂಲಕ ಆಡಳಿತ ಬಿಜೆಪಿ ನಡೆಸುತ್ತಿದ್ದು, ಇದಕ್ಕೆ ಚುನಾವಣಾ ಆಯೋಗವು ಕೈಜೋಡಿಸಿರುವುದು ವಿಪರ್ಯಾಸ ಎಂದು ನುಡಿದರು. ಇದರ ವಿರುದ್ಧ ರಾಹುಲ್ ಗಾಂಧಿ ಆರಂಭಿಸಿದ ಹೋರಾಟ ದೇಶದಾದ್ಯಂತ ವ್ಯಾಪಿಸಲಿದೆ ಎಂದು ಅವರು ನುಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು.

ಮುಖಂಡರಾದ ಮೊಹಮ್ಮದ್ ಸೀಗಂದಡಿ, ಬರ್ನಾಡ್ ಡಿ ಅಲ್ಮೇಡ, ನವೀನ್ ಶೆಟ್ಟಿ ಚೆರುಗೋಳಿ, ರಾಜೇಶ್ ನಾಯ್ಕ್ ಹೇರೂರು, ಬಾಬು ಇಚ್ಲಂಗೋಡು, ಮುಹಮ್ಮದ್ ಮೇರ್ಕಳ, ಇಬ್ರಾಹಿಂ ಹಾಜಿ, ಗೀತಾ ಬಂದ್ಯೋಡು, ಕುಂಞಾಲಿ, ಸುಂದರ, ಇಸ್ಮಾಯಿಲ್, ಮೊಹಮ್ಮದ್ ಹನೀಫ್, ಮೊಹಮ್ಮದ್ ಶಫೀಕ್, ರಜಾಕ್, ತುಳಸೀಧರ, ಔಫ್ ಕಟ್ಟ, ಹನೀಫ್, ಮುಹಮ್ಮದ್, ಹನೀಫ್ ವರ್ಕಾಡಿ ಭಾಗವಹಿಸಿದರು. ಅಶ್ರಫ್ ಮುಟ್ಟಂ ಸ್ವಾಗತಿಸಿ, ಶಿಹಾಬ್ ಎಂ.ಕೆ. ವಂದಿಸಿದರು.

You cannot copy contents of this page