ಕಾಸರಗೋಡು: ಕಾಲೇಜು ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಮಧೂರಿಗೆ ಸಮೀಪದ ಪಟ್ಲ ಕುದ್ರೆಪ್ಪಾಡಿ ನಿವಾಸಿ ಹಾಗೂ ಮಂಗಳೂರಿನ ಖಾಸಗಿ ಕಾಲೇಜೊಂದರ ಬಿಸಿಐ ಮೂರನೇ ವರ್ಷದ ವಿದ್ಯಾರ್ಥಿ ಇಬ್ರಾಹಿಂ (20) ನಾಪತ್ತೆಯಾದ ಯುವಕ. ಈತ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಹೋದ ನಂತರ ಹಿಂತಿರುಗಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆತನ ತಂದೆ ಅಬ್ದುಲ್ ಖಾದರ್ ತಿಳಿಸಿದ್ದಾರೆ. ಇದರಂತೆ ಪೊಲೀಸರು ಮಿಸ್ಸಿಂಗ್ ಪ್ರಕ ರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
