ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ನಡೆಸುವ ತಂಡದ ಇಬ್ಬರ ಸೆರೆ

ಮಂಜೇಶ್ವರ: ಶಾಲಾ ವಿದ್ಯಾರ್ಥಿ ಗಳನ್ನು ಮಾದಕವಸ್ತುಗಳತ್ತ ಆಕರ್ಷಿಸಲು ಗಾಂಜಾ ಮಿಠಾಯಿ ವಿತರಿಸುವ ತಂಡದ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ.

ಕುಂಜತ್ತೂರು ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ಮುನೀರ್ (48), ಉದ್ಯಾವರ ಬಲ್ಲಂಗೋಡು ನಿವಾಸಿ ಮುಹಮ್ಮದ್ ಹನೀಫ್ ಎಂಬಿವರನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್  ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ಸೆರೆಹಿಡಿದಿದೆ. ಅಬಕಾರಿ ಇನ್‌ಸ್ಪೆಕ್ಟರ್ ವಿಷ್ಣು ಪ್ರಕಾಶ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ 0.21  ಗ್ರಾಂ ಮೆಥಾಫಿಟಮಿನ್, 81 ಗ್ರಾಂ ಗಾಂಜಾ ಎಂಬಿವುಗಳನ್ನು ವಶಪಡಿಸಿ ಇಬ್ಬರನ್ನು ಸೆರೆಹಿಡಿಯಲಾಗಿದೆ.

ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸನ್ ಪತ್ತಿಲ್, ವಿ. ಪ್ರಮೋದ್ ಕುಮಾರ್, ಪ್ರಿವೆಂಟೀವ್ ಆಫೀಸರ್ ಸಿ. ಅಜೀಶ್, ಅಧಿಕಾರಿಗಳಾದ  ಸೋನು ಸೆಬಾಸ್ಟಿಯನ್, ಶಿಜಿತ್ ವಿ.ವಿ., ಮೋಹನ್ ಕುಮಾರ್ ಎಲ್, ಚಾಲಕ ಕ್ರಿಸ್ಟಿನ್ ಪಿ.ಎ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು. ಎಕ್ಸೈಸ್ ಸೈಬರ್ ಸೆಲ್‌ನ ಸಿವಿಲ್ ಎಕ್ಸೈಸ್ ಆಫೀಸರ್ ನಿಖಿತ್‌ರ ಕರ್ತವ್ಯ ಆರೋಪಿಗಳನ್ನು ಸೆರೆಹಿಡಿಯಲು ಸಹಾಯವಾಯಿತು.

You cannot copy contents of this page