ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಬಳಿ ವ್ಯಕ್ತಿಯೊಬ್ಬರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಶಿವಗಂಗಾ ಕರೈಕುಡಿ ಕಟ್ಟು ತಲೈವಾಸಲ್ ಬಚ್ಚ ಕೂಡಲ್ ಸ್ಟ್ರೀಟ್‌ನ ನಜ್ಮುದ್ದೀನ್ ಖಾದರ್ ಬಚ್ಚ (71) ಎಂಬವರು ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಸುಮಾರು 6.15ರ ವೇಳೆ ಘಟನೆ ನಡೆದಿದೆ. ಹಳಿ ದಾಟುತ್ತಿದ್ದಾಗ ಇವರಿಗೆ ರೈಲು ಢಿಕ್ಕಿ ಹೊಡೆದಿರಬಹು ದೆಂದು ಅಂದಾಜಿಸಲಾಗಿದೆ. ಮೃತದೇಹದ ಬಳಿ ಪತ್ತೆಯಾದ ಗುರುತುಚೀಟಿ ಮೂಲಕ ವ್ಯಕ್ತಿಯ ಗುರುತು ಹಚ್ಚಲಾಗಿದೆ. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
