ಜನರಲ್ ಆಸ್ಪತ್ರೆಯಲ್ಲಿ ಉಚಿತ ಊಟ ವಿತರಿಸುವ ವ್ಯಕ್ತಿ ವಿರುದ್ಧ ದೂರು: ತನಿಖೆಗೆ ಮಾನವಹಕ್ಕು ಆಯೋಗ ಆದೇಶ

ಕಾಸರಗೋಡು: ಜನರಲ್ ಆಸ್ಪತ್ರೆಯ ರೋಗಿಗಳಿಗೆ ದಿನಂಪ್ರತಿ ಉಚಿತವಾಗಿ ಮಧ್ಯಾಹ್ನದೂಟ ವಿತರಿಸುವ ವ್ಯಕ್ತಿ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇ ಕೆಂದು ಮಾನವ ಹಕ್ಕು ಆಯೋಗದ ಜ್ಯುಡೀಶಿಯಲ್ ಸದಸ್ಯ ಕೆ. ಬೈಜುನಾಥ್ ಟೌನ್ ಎಸ್‌ಎಲ್‌ಒಗೆ ನಿರ್ದೇಶಿಸಿದ್ದಾರೆ.

ದೂರಿನಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಆಯೋಗದ ಅರಿವಿಗೆ ಬಂದಿಲ್ಲವೆಂದೂ ಆದೇಶ ದಲ್ಲಿ ತಿಳಿಸಲಾಗಿದೆ. ಉಚಿತ ಆಹಾರದ ಹೆಸರಲ್ಲಿ ಜನರಿಂದ ಸಾವಿರಾರು ರೂಪಾಯಿ ಪಡೆಯು ತ್ತಿರು ವುದಾಗಿ ಆರೋಪಿಸಿ ಸಲ್ಲಿಸಿದ ದೂರಿನಂತೆ ಈ ನಿರ್ದೇಶ ನೀಡಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಸುಪರಿಂಟೆಂಡೆಂಟರಿಂದ ಆಯೋಗ ವರದಿ ಕೇಳಿತ್ತು. ರೋಗಿಗಳಿಗೆ ಹಾಗೂ ಅವರ ಜತೆಗಿರುವವರಿಗೆ ಉಚಿತ ವಾಗಿ ಊಟ ನೀಡುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. 2008 ಎಪ್ರಿಲ್ 8ರಂದು ಆಸ್ಪತ್ರೆ ಸುಪರಿಂಟೆಂಡೆಂಟ್ ತಲಶೇರಿ ಯಲ್ಲಿ ಕಾರ್ಯಾಚರಿಸುವ ದೈವಪರಿ ಪಾಲನ ಟ್ರಸ್ಟ್‌ನೊಂದಿಗೆ ಮಧ್ಯಾಹ್ನ ದೂಟ ಉಚಿತವಾಗಿ ವಿತರಿಸಲು ವಿನಂತಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಟ್ರಸ್ಟ್‌ನ ಕಾರ್ಯಕರ್ತ ಆಹಾರ ಕ್ಯಾಂಟೀನ್ ಮೂಲಕ ನೀಡುತ್ತಿರುವುದಾಗಿಯೂ ಇದುವರೆಗೆ ರೋಗಿಗಳ ಭಾಗದಿಂದ ದೂರು ಲಭಿಸಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಒಂದು ಊಟಕ್ಕೆ ತಲಾ 30 ರೂ.ನಂತೆ ಒಟ್ಟು ರೋಗಿಗಳಿಗೆ ನೀಡುವ ಊಟದ ಮೊತ್ತ ಕ್ಯಾಂಟೀನ್‌ಗೆ ನೀಡುತ್ತಿರುವುದಾಗಿ ಟ್ರಸ್ಟ್ ತಿಳಿಸಿದೆ. ಈ ಮೊತ್ತವನ್ನು ಕೊಡುಗೆಯಾಗಿ ದೈವ ಪರಿಪಾಲನ ಟ್ರಸ್ಟ್‌ನ ಹೆಸರಲ್ಲಿ ಪಡೆ ಯುತ್ತಿರುವುದಾಗಿಯೂ ಪದಾ ಧಿಕಾರಿಗಳು ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಈ  ಕುರಿತು ತನಿಖೆ ನಡೆಸಬೇಕೆಂದು ಕಾಸರಗೋಡು ಹಾಶಿಂ ಸ್ಟ್ರೀಟ್‌ನ ನಿವಾಸಿ ಅಬ್ದುಲ್ ಸತ್ತಾರ್ ಒತ್ತಾಯಿಸಿದ್ದಾರೆ.

You cannot copy contents of this page