ಕಾಸರಗೋಡು: ಅಡ್ಕತ್ತಬೈಲು ಮಜ್ಲೀಸ್ ಎಜುಕೇಶನ್ ಟ್ರಸ್ಟ್ನ ಅಧೀನದಲ್ಲಿ ಕಾರ್ಯಾಚರಿಸುವ ಮಜ್ಲೀಸ್, ಅಲ್ ಬಯಾನ್ ಸಂಸ್ಥೆಗಳ ವಾರ್ಷಿಕ ಹಾಗೂ ಸನದುದಾನ ಸಮ್ಮೇಳನ ಜರಗಿತು. ಇದೇ ವೇಳೆ ಖುರ್ಆನ್ನಕೈ ಬರಹದ ಪ್ರತಿ ಸಿದ್ಧಪಡಿಸಿದ ವಿದ್ಯಾರ್ಥಿನಿ, ಒಂದೇ ರಾತ್ರಿ ರಕ್ಅತ್ ಸುನ್ನತ್ ನಮಸ್ಕಾರದಲ್ಲಿ ಖುರ್ಆನ್ ಕಂಠಪಾಠ ಪಾರಾಯಣ ಮಾಡಿದ 34 ಮಂದಿಯನ್ನು ಅಭಿನಂದಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಕರೀಂ ಸಿಟಿಗೋಲ್ಡ್ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು. ವಿ.ಎಚ್. ಅಲಿಯಾರ್ ಖಾಸಿಮಿ ಮರ್ಹು ರಸುಲ್, ಹಾಫೀಸ್ ಹಾಶಿಂ ಹಾಸನಿ ಪ್ರವಚನ ನೀಡಿದರು. ಕುಂಬೋಳ್ ಶಮೀಂ ತಂಙಳ್ ಸನದುದಾನ, ಅಬ್ದುಲ್ ಖಾದಿರ್ ಆಟ್ಟಕೋಯ ತಂಙಳ್ ಆಲೂರು ದುವಾ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ, ಎ. ಅಬ್ದುಲ್ ರಹ್ಮಾನ್, ಟ್ರಸ್ಟಿಗಳಾದ ಮಹಮ್ಮೂದ್ ಕೆ.ಎ, ಟಿ.ಕೆ. ಮುಹಮ್ಮದ್ ಕುಂಞಿ, ಅಬ್ದುಲ್ ಖಾದರ್, ಅಸೈನಾರ್, ಶರಫುದ್ದೀನ್, ಅಹಮ್ಮದ್ ಕೋಳಿಯಾಡ್, ಎಂ.ಕೆ. ಅಬ್ದುಲ್ ಖಾದರ್, ಜಲೀಲ್, ಎಂ.ಟಿ. ಮುಹಮ್ಮದ್ ಕುಂಞಿ, ಸಿದ್ದಿಕ್ ಬೇವಿಂಜ, ಹನೀಫ್, ಎ.ಟಿ. ಮುಹಮ್ಮದ್ ಮಾತನಾಡಿದರು. ಎಂ.ಎ. ಮುನೀರ್ ಸ್ವಾಗತಿಸಿ, ಸಿ.ಎಂ. ಅಬ್ದುಲ್ಲ ವಂದಿಸಿದರು. ಈ ಸಂದರ್ಭ ಅಲ್ ಬಯಾನ್ ವಿದ್ಯಾರ್ಥಿನಿ ಫಾತಿಮತ್ ಮುಫೀದ ಬರೆದು ಸಿದ್ಧಪಡಿಸಿದ ಖುರ್ಆನ್ನ ಕೈಬರಹ ಪ್ರತಿಯ ಬಿಡುಗಡೆ ನಡೆಯಿತು. ವನಿತಾ ಸಮ್ಮೇಳನ ಕೂಡಾ ನಡೆಯಿತು.
