ಬದಿಯಡ್ಕ: ಬದಿಯಡ್ಕ ಸಮೀಪದ ಮಡಿಪ್ಪು ನಿವಾಸಿ ಕೃಷ್ಣ ಭಟ್ (76) ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಹಿರಿಯ ಕೃಷಿಕನಾಗಿದ್ದ ಇವರಿಗೆ ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕೃಷಿಯ ಜತೆಗೆ ದ್ವಿಚಕ್ರ ವಾಹನಗಳ ದುರಸ್ತಿಯಲ್ಲಿ ನಿಪುಣರಾಗಿದ್ದರು. ಇವರ ಪತ್ನಿ ರುಕ್ಮಿಣಿ ಈ ಹಿಂದೆ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ವೆಂಕಟ್ರಾಜ, ವಿಜಯರಾಜ, ಗಣೇಶ್, ಸೊಸೆಯಂದಿರಾದ ವಿನಯಶ್ರೀ, ವಸುದಾ, ಸಹೋದರ ಗಣಫತಿ ಭಟ್, ಸಹೋದರಿ ಸವಿತ (ಉಪ್ಪಿನಂಗಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.