ಕಾಸರಗೋಡು: ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬ ನಿರೀಕ್ಷೆಯನ್ನಿರಿಸಿದ್ದ ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನಿರಾಸೆಯುಂಟು ಮಾಡಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರಕಾರದಿಂದ ಲಭಿಸಬೇಕಾದ ಪಿಂಚಣಿ ಕಳೆದ 7 ತಿಂಗಳಿಂದ ಲಭಿಸಿಲ್ಲ ವೆನ್ನಲಾ ಗಿದೆ. ಓಣಂ ಹಬ್ಬಾಚರಣೆ ಸಂದರ್ಭದಲ್ಲಿ ಎಲ್ಲರಿಗೂ ಪಿಂಚಣಿ ಸಹಿತ ಸೌಲಭ್ಯಗಳು ಲಭಿಸುತ್ತಿದ್ದು, ತಮಗೂ ಅವರ ಜತೆ ಪಿಂಚಣಿ ಲಭಿಸಬಹುದೆಂದು ಇವರು ನಿರೀಕ್ಷೆಯಿರಿಸಿದ್ದರು. ಆದರೆ ಇದುವರೆಗೆ ಪಿಂಚಣಿ ಮೊತ್ತ ಕೈಗೆ ತಲುಪದಿರುವುದು ಇವರಿಗೆ ತೀವ್ರ ನಿರಾಸೆ ಮೂಡಿಸಿದೆ. ಮಾತ್ರವಲ್ಲ ಓಣಂ ಆಚರಮೆಗೆ ಕೈಯಲ್ಲಿ ನಯಾಪೈಸೆ ಇಲ್ಲದೆ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂ ದಿದೆ ಎಂದು ದೂರಲಾಗಿದೆ. ಇವರಿಗೆ ಅರ್ಹತೆ ಅನುಸಾರ ತಿಂಗಳಿಗೆ 2200 ರೂ., 1600 ರೂ., 1200 ರೂ. ಎಂಬೀ ರೀತಿಯಲ್ಲಿ ಪಿಂಚಣಿ ಮೊತ್ತ ಲಭಿಸುತ್ತಿತ್ತು. ಆದರೆ ಇದೀಗ ೭ ತಿಂಗಳಿಂದ ಇದು ಲಭಿಸಿಲ್ಲವೆಂದು ದೂರಲಾಗಿದೆ. ಸರಕಾರದಿಂದ ಲಭಿಸುವ ಪಿಂಚಣಿಯನ್ನು ಮಾತ್ರ ಆಶ್ರಯಿಸಿ ಜೀವಿಸುವ ಹಲವರಿದ್ದಾರೆ. ಆದರೆ ಅದು ಕೂಡಾ ಮೊಟಕುಗೊಂಡಿರುವುದು ಇವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ನಾಡಿನಾದ್ಯಂತ ಓಣಂ ಹಬ್ಬದ ಸಂ ಭ್ರಮದಲ್ಲಿರುವಾಗ ಎಂಡೋಸಲ್ಫಾನ್ ಸಂತ್ರಸ್ತರನ್ನು ಅವಗಣಿಸಿದ ಸಂಬಂಧಪಟ್ಟ ಅಧಿಕಾರಿಗಳ ನೀತಿ ಖಂಡನೀಯವೆಂದು ಅಭಿಪ್ರಾಯ ಕೇಳಿಬಂದಿದೆ.
