ಅಕ್ರಮ ಮರಳುಗಾರಿಕೆ: ಇಬ್ಬರ ಸೆರೆ

ಕುಂಬಳೆ: ಕೇರಳ ಮಾರಿಟೈಂ ಮಂಡಳಿಯ ವ್ಯಾಪ್ತಿಗೊಳಪಟ್ಟ ಶಿರಿಯಾ ಅಳಿವೆ ಬಾಗಿಲಿನಿಂದ ಅಕ್ರಮವಾಗಿ ತೆಗೆದು ವ್ಯಾನ್‌ನಲ್ಲಿ ಹೊಯ್ಗೆ ಸಾಗಿಸಿದುದಕ್ಕೆ ಸಂಬಂಧಿಸಿ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ.

ಆರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ(40) ಮತ್ತು  ಪೆರುವಾಡು ಕಡಪ್ಪುರದ ಮೊಹಮ್ಮದ್ ಶಾಫಿ(25) ಎಂಬವರು ಬಂಧಿತ ರಾದವರು. ಬಿಎನ್‌ಎಸ್‌ನ ಸೆಕ್ಷನ್ 305 (ಇ) ಪ್ರಕಾರ ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದ. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಶಿರಿಯ ಅಳಿವೆ ಬಾಗಿಲಿನಿಂದ ದೋಣಿ ಉಪಯೋಗಿಸಿ ಹೊಯ್ಗೆ ತೆಗೆದು ಅದನ್ನು ಗೋಣಿ ಚೀಲದಲ್ಲಿ ತುಂಬಿಸಿ ವ್ಯಾನ್‌ನಲ್ಲಿ ಸಾಗಿಸಲಾಗುತ್ತಿತ್ತೆಂ ದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್‌ಭರತ್ ರೆಡ್ಡಿ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ಡಾ. ನಂದಗೋಪಾಲ್ ಎಂರ ಮೇಲ್ನೋಟದಲ್ಲಿ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಜಿಜೀಶ್ ಪಿ.ಕೆ, ಎಸ್‌ಐ ಶ್ರೀ ಜೇಶ್, ಎಸ್‌ಸಿಪಿಒ ಚಂದ್ರನ್ ಮತ್ತು ಚಾಲಕ ಅಜೀಶ್ ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

You cannot copy contents of this page