ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಜರಗಿತು. ಲಿಂಗಪ್ಪ ಶೆಟ್ಟಿಗಾರ್ ಪರಂಕಿಲ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕೃಷ್ಣ ಪಿ ಅಡ್ಕ, ಬಾಲಕೃಷ್ಣ ಅಂಬಾರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 39ನೇ ವರ್ಷದ ಶಾರದಾ ಮಹೋತ್ಸವ ಹಾಗೂ 75ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಉತ್ಸವದ ಯಶಸ್ವಿಗೆ ನೂತನ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ತುಂಗ, ಉಪಾಧ್ಯಕ್ಷರಾಗಿ ಕೃಷ್ಣ ಪ್ರಗತಿನಗರ ಮುಟ್ಟಂ, ಜಾನಕಿ ಶೆಟ್ಟಿಗಾರ್ ಪೋರಿಕೋಡು, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಶೆಟ್ಟಿಗಾರ್ ಪೋರಿಕೋಡು, ಜೊತೆ ಕಾರ್ಯದರ್ಶಿಗಳಾಗಿ ಪ್ರಮೋದ್ ಹೇರೂರು, ವನಿತಾ ಸತೀಶ್ ಶೆಟ್ಟಿ ಪರಂಕಿಲ, ಕೋಶಾಧಿಕಾರಿಯಾಗಿ ರಮೇಶ್ ಹೊಳ್ಳ ಪರಂಕಿಲ, ಲೆಕ್ಕಪರಿಶೋಧಕರಾಗಿ ಅಮಿತ್ ಪರಂಕಿಲ ಇವರನ್ನು ಒಳಗೊಂಡ ಸಮಿತಿಯನ್ನು ರೂಪೀಕರಿಸಲಾ ಯಿತು. ಮಂದಿರದ ಆಡಳಿತ ಮಂಡಳಿಯ ಟ್ರಸ್ಟಿಗಳಲ್ಲಿ ಓರ್ವರಾದ ಶ್ರೀಧರ ಶೆಟ್ಟಿ ಪರಂಕಿಲ ಸ್ವಾಗತಿಸಿದರು. ಅಮಿತ್ ಪರಂಕಿಲ ವಂದಿಸಿದರು.
