ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಟ್ಟಡ ನಿರ್ಮಾಣಗಳು ಅಧಿಕಾರಿಗಳ ನಿರ್ಲಕ್ಷ್ಯ ಕ್ರಮದಿಂದಾಗಿ ಅವೈಜ್ಞಾನಿಕವಾಗಿವೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವುಗಳನ್ನು ನೋಡಿ ನಿಂತಿರುವುದರ ಫಲವಾಗಿ ಇದೀಗ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆಯೆಂದು ಮಾನವ ಹಕ್ಕು ಕಾರ್ಯಕರ್ತ ಕೂಕಲ್ ಬಾಲಕೃಷ್ಣನ್ ಆರೋಪಿಸಿದ್ದಾರೆ. ಉಪ್ಪಳ ಕೈಕಂಬದ ಅಪಾರ್ಟ್ಮೆಂಟ್ವೊಂದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪರಿಸರ ಪ್ರದೇಶಕ್ಕೆ ಮಲಿನ ಜಲ ಹರಿದುಬಿಡುವುದರ ವಿರುದ್ಧ ನಿನ್ನೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಫ್ಲಾಟ್ನ ಮುಂಭಾಗದಲ್ಲಿ ಪೊಲೀಸರು ಮಾರ್ಚ್ಗೆ ತಡೆಯೊಡ್ಡಿದ್ದಾರೆ. ಬಹುಜನ ಮುನ್ನಡೆ ಕ್ರಿಯಾ ಸಮಿತಿ ಚೆಯರ್ಮೆನ್ ಮಹಮೂದ್ ಮಣ್ಣಂಗುಳಿ, ಅಬ್ದುಲ್ ರಹ್ಮಾನ್ ಹಾಜಿ, ಸಿದ್ದಿಕ್ ಕೈಕಂಬ, ಸತ್ಯನ್ ಸಿ ಉಪ್ಪಳ, ಮಹಮೂದ್ ಕೈಕಂಬ, ಕೆ.ಎಫ್. ಇಕ್ಭಾಲ್ ಉಪ್ಪಳ, ಅಯೂಬ್ ಹಾಜಿ ಮಲಂಗ್, ಅಬು ತಮಾಮ್, ರಾಮ ಮೇಸ್ತ್ರಿ, ಅನ್ಸಾರ್ ಪಳ್ಳಿ, ಶುಕೂರ್, ಲತೀಫ್ ಮಕ್ಕಿ, ಅಬ್ದುಲ್ ಖಾದರ್ ಮಣ್ಣಂಗುಳಿ ಮೊದಲಾದವರು ಮಾರ್ಚ್ಗೆ ನೇತೃತ್ವ ನೀಡಿದರು.
