ಕಾಸರಗೋಡು: ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾರ್ಯಕರ್ತ ಮೇಲ್ಪರಂಬ ಕಡವತ್ ನಿವಾಸಿ ಹಾಗೂ ನೆಲ್ಲಿಕುಂಜೆ ಬಂಗರಗುಡ್ಡೆ ಕುದೂರಿನಲ್ಲಿ ವಾಸಿಸುತ್ತಿದ್ದ ಉಬೈದುಲ್ಲಾ ಕಡವತ್ (63) ನಿಧನಹೊಂದಿದರು. ನೆಬಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿಗೆ ಹೋಗಿದ್ದ ಇವರಿಗೆ ದೈಹಿಕ ಅಸ್ವಸ್ಥತೆ ಕಂಡುಬಂದಿದ್ದು, ಇದರಿಂದ ಇವರನ್ನು ಮನೆಗೆ ತಲುಪಿಸಲಾಯಿತು.
ಚೆಂಬರಿಕ ಖಾಸಿಯಾಗಿದ್ದ ಸಿ.ಎಂ. ಅಬ್ದುಲ್ಲ ಮೌಲವಿಯವರ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಹೋರಾಟ ನಡೆಸುವ ಸಮಿತಿಯ ಮುಂಚೂಣಿ ಕಾರ್ಯಕರ್ತನಾಗಿ ದ್ದರು. ಎನ್‌ಸಿಪಿ ಶರತ್ ಪವಾರ್ ವಿಭಾಗ ಕಾಸರಗೋಡು ಬ್ಲೋಕ್ ಮಾಜಿ ಅಧ್ಯಕ್ಷರಾಗಿದ್ದರು. ಜಿಲ್ಲಾ ಜನಪರ ನೀತಿ ವೇದಿ ಸಹಿತ .ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಫರೀದ, ಮಕ್ಕಳಾದ ಉನೈಫ್, ಅಬ್ದುಲ್ಲ, ಅಬೂಬಕ್ಕರ್ ಸಿದ್ದಿಕ್,ಸೊಸೆ ಶಿಫಾನ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ.