ಕಾಸರಗೋಡು: ಯುವಕನೋರ್ವ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಇದೇ ಸಂದರ್ಭದಲ್ಲಿ ಆತನ ಬೈಕ್ ಹೊಳೆ ಬಳಿ ಪತ್ತೆಯಾಗಿದೆ.
ಕೋಡೋಂ ಗ್ರಾಮ ಕರಿಯಂವಳಪ್ಪಿನ ಬಾಲಕೃಷ್ಣನ್ ಎಂಬವರ ಪುತ್ರ, ಪೊಯಿನಾಚಿಯ ವಾಹನ ಶೋರೂಂ ಸಿಬ್ಬಂದಿ ಸಜಿತ್‌ಲಾಲ್ (26) ನಾಪತ್ತೆಯಾದ ಯುವಕ. ಇವರು ಮೊನ್ನೆ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಕೆಲಸ ಮಾಡುವ ಕಚೇರಿಗೆ ಹೋಗಿದ್ದು ನಂತರ ಅವರು ಮನೆಗೆ ಹಿಂತಿರುಗಿಲ್ಲ ವೆಂದು ರಾಜಪುರಂ ಪೊಲೀಸ್ ಠಾಣೆಗೆ ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಗೊಳ ಪಟ್ಟ ಆಯಂಪಾರ ಹೊಳೆಗೆ ಸೇರುವ ಬದಿ ಸಜಿತ್‌ಲಾಲ್‌ರ ಬೈಕ್ ಮತ್ತು ಹೆಲ್ಮೆಟ್ ನಿನ್ನೆ ಬೆಳಿಗ್ಗೆ ಪತ್ತೆಯಾಗಿದೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್‌ಗೊಂಡ ಸ್ಥಿತಿಯಲ್ಲಿತ್ತು. ಇದರಿಂದ ಶಂಕೆಗೊಂಡ ಪೊಲೀಸರು ಅಗ್ನಿಶಾಮಕದಳದ ಸಹಾಯದಿಂದ ಹೊಳೆಯಲ್ಲಿ ವ್ಯಾಪಕ ಶೋಧ ನಡೆಸಿದರೂ ಯಾವುದೇ ಪ್ರಯೋಜನ ಲಭಿಸಿಲ್ಲ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.