ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ವಿದ್ಯಾರ್ಥಿ ಮೃತಪಟ್ಟನು. ಸಹ ಸವಾರ ಗೆಳೆಯ ಗಾಯಗೊಂಡಿದ್ದಾನೆ. ಬೇಡಡ್ಕ ನಿವಾಸಿ ಸಿ. ಕೌಶಿಕ್‌ನಾಥ್ (19) ಮೃತಪಟ್ಟ ವಿದ್ಯಾರ್ಥಿ. ಗೆಳೆಯ ಕೈಲಾಸ್ ಗಾಯಗೊಂಡಿದ್ದಾನೆ. ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಪೊಯಿನಾಚಿ- ಕುಂಡಂಗುಳಿ ರಸ್ತೆಯ ಪರಂಬ್‌ನಲ್ಲಿ ಅಪಘಾತ ಸಂಭವಿಸಿದೆ. ಚೆರ್ಕಳ ದಲ್ಲಿರುವ ಗೆಳೆಯನ ಮನೆಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರಾದರೂ ಕೌಶಿಕ್ ಮೃತಪಟ್ಟಿದ್ದಾನೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು.
ಸ್ಕೂಟರ್ ಚಲಾಯಿಸುತ್ತಿದ್ದ ಮಧ್ಯೆ ಕೌಶಿಕ್‌ಗೆ ಹೃದಯಾಘಾತವು ಂಟಾಗಿರುವುದಾಗಿಯೂ, ಇದರಿಂದಾಗಿ ಸ್ಕೂಟರ್ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿಯಿಂದ ಮಾತ್ರವೇ ಸರಿಯಾದ ಕಾರಣ ಸ್ಪಷ್ಟವಾಗಲಿದೆ ಎಂದು ಮೇಲ್ಪರಂಬ ಪೊಲೀಸರು ತಿಳಿಸಿದ್ದಾರೆ. ಬೇಡಡ್ಕದ ಸಿ. ರವೀಂದ್ರನ್‌ರ ಪುತ್ರನಾಗಿದ್ದಾನೆ ಕೌಶಿಕ್.