ಮಂಜೇಶ್ವರ: ಮನೆಯಿಂದ ನಾಪತ್ತೆಯಾದ ಮಹಿಳೆಯ ಮೃತದೇಹ ಬಾವಿಯಲ್ಲಿಪತ್ತೆಯಾದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ಅಡ್ಕತ್ತಗುರಿ ನಿವಾಸಿ ರೋಕಿ ಡಿ ಸೋಜಾರ ಪತ್ನಿ ಐರಿನಾ ಡಿ ಸೋಜಾ [60] ಎಂಬವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಗುರುವಾರ ಬೆಳಿಗ್ಗೆ ತನಕ ಮನೆಯಲ್ಲಿದ್ದ ಇವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಡಿದಾಗ 8.30ರ ವೇಳೆ ಮನೆ ಪರಿಸರದ ಬಾವಿಯಲ್ಲಿ ಮೃತದೇಹ ಕಂಡುಬAದಿದೆ. ಉಪ್ಪಳದಿಂದ ಅಗ್ನಿ ಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಲಾಗಿದೆ. ಮಂಜೇಶ್ವರ ಪೊಲೀಸರು ತಲುಪಿ ಪಂಚನಾಮೆ ನಡೆಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರು ಪತಿ, ಪುತ್ರ ಜೋಯಿ ಡಿ ಸೋಜಾ, ಪುತ್ರಿ ಜೊಸ್ಸಿನಿ ಡಿ ಸೋಜಾ, ಅಳಿಯ ಸಂದೇಶ್ ಡಿ ಸೋಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
