ಗಡಿನಾಡ ಕಲಾವಿದರು ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಗಡಿನಾಡ ಕಲಾವಿದರು ಕಾಸರಗೋಡು ಇದರ ವಾರ್ಷಿಕ ಮಹಾಸಭೆ ಜರಗಿತು. ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುಕುಮಾರ್ ಕೆ. ಕಣ್ಣನ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಕಾಂತ ಲೆಕ್ಕಪತ್ರ ಮಂಡಿಸಿದರು. ಹಿರಿಯ ನಾಟಕ ಕಲಾವಿದ ಸುರಾಜ್ ಮಾವಿಲರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಸುಕುಮಾರ್ ಕೆ. ಕಣ್ಣನ್, ಅಧ್ಯಕ್ಷರಾಗಿ ವರಪ್ರಸಾದ್ ಕೋಟೆಕಣಿ, ಉಪಾಧ್ಯಕ್ಷರಾಗಿ ದಿವಾಕರ ಅಶೋಕನಗರ, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಕುಮಾರದಾರ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಬೇಕಲ್, ಕೋಶಾಧಿಕಾರಿಯಾಗಿ ಜಯಶ್ರೀ ದಿವಾಕರ, ಸಂಚಾಲಕರಾಗಿ ರವೀಂದ್ರ ಮಲ್ಲಾವರ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಯತೀಶ್ ರೈ ಮುಳ್ಳೇರಿಯ, ನಾರಾಯಣ, ಜನಾರ್ದನ, ಭಾರತಿಬಾಬು, ಅನುರಾಧ, ರಾಧಾಕೃಷ್ಣ, ಶ್ರೀಕಾಂತ್, ಗಣೇಶ್ ಕೆ.ಬಿ, ನಾರಾಯಣಮೂರ್ತಿ ಆಯ್ಕೆಯಾದರು.

You cannot copy contents of this page