ಕಾಸರಗೋಡು: ಬಟ್ಟತ್ತೂರು ಕೋಟಪ್ಪಾರ ರಸ್ತೆ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ದಲ್ಲಿ ನಿರತರಾದ ಆರೋಪದಂತೆ ಐದು ಮಂದಿಯನ್ನು ಎಸ್‌ಐ ಎಂ. ಸವ್ಯಸಾಚಿಯವರ ನೇತೃತ್ವದ ಬೇಕಲ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 2,510 ರೂ. ನಗದು ವಶಪಡಿಸಿಕೊಂ ಡಿದ್ದಾರೆ. ಪನೆಯಾಲ ನಿವಾಸಿಗಳಾದ ಗುರುವಯ್ಯ (52), ರಾಮಚಂದ್ರನ್ (65), ಸುಬ್ರಾಯ (65), ಪ್ರಭಾಕರನ್ (70) ಮತ್ತು ಪದ್ಮನಾಭನ್ (72) ಬಂಧಿತರಾದವರಾಗಿದ್ದಾರೆ.