ಅರಣ್ಯ ವಲಯಗಳ ಪ್ರವಾಸಿ ಕೇಂದ್ರಗಳಿಗೆ ಇನ್ನು ಏಕ ಮಂಡಳಿ

ಕಾಸರಗೋಡು: ಅರಣ್ಯ ವಲಯಗಳ ಎಲ್ಲಾ ಪ್ರವಾಸಿ ಕೇಂದ್ರಗಳು ಇನ್ನು ಏಕಮಂಡಳಿ ಆಶ್ರಯದಲ್ಲಿ ಕಾರ್ಯವೆಸಗಲಿವೆ. ಇದಕ್ಕಾಗಿ ರಾಜ್ಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ‘ಕೇರಳ ವನ- ಇಕೋ ಟೂರಿಸಂ ಅಭಿವೃದ್ಧಿ ಮಂಡಳಿ’ಗೆ ರೂಪು ನೀಡಲಾಗುವುದು. ಇದಕ್ಕಾಗಿ ಕರಡು ಮಸೂದೆಗೆ ರೂಪು ನೀಡಲಾಗಿದ್ದು, ಅದು ಈಗ ಸಚಿವಸಂಪುಟದ ಪರಿಶೀಲನೆಯಲ್ಲಿದೆ. ಅರಣ್ಯ ಇಲಾಖೆಯ ಇಕೋ ಟೂರಿಸಂಗೆ ಸಂಬಂಧಪಟ್ಟ ಸಂಘಗಳು, ಹುಲಿ ಸಂರಕ್ಷಣಾ ಫೌಂಡೇಶನ್‌ಗಳು, ಅರಣ್ಯ ಅಭಿವೃದ್ಧಿ ಸಂಸ್ಥೆಗಳು ಮತ್ತು ಇಕೋ ಡೆವಲಪ್‌ಮೆಂಟ್ ಸಮಿತಿಗಳು ಇನ್ನು ಹೊಸ ಮಂಡಳಿಯಡಿ ಕಾರ್ಯವೆಸಗಲಿದೆ. ಆದರೆ ಆರ್ಥಿಕ ನಿಯಂತ್ರಣವಿರುವ ಕಾರಣದಿಂದಾಗಿ ಹೊಸ ಹುದ್ದೆಗಳನ್ನು ಸೃಷ್ಟಿಸದೇ ಇರುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ. ಈ ಹೊಸ ಮಂಡಳಿಗಾಗಿ ವಿಶೇಷ ನಿಧಿಗೂ ರೂಪು ನೀಡಲಾಗುವುದು.

ಜ್ಯಾರಿಯಲ್ಲಿ ರಾಜ್ಯದಲ್ಲಿ ಹಿರಿದು ಮತ್ತು ಕಿರಿದು ಸೇರಿದಂತೆ ಒಟ್ಟು ೮೦ರಷ್ಟು ಇಕೋ ಟೂರಿಸಂ ಕೇಂದ್ರಗಳು ಅರಣ್ಯ ಇಲಾಖೆಯ ಆಶ್ರಯದಲ್ಲಿ ಕಾರ್ಯವೆಸಗುತ್ತಿದೆ. ಇದರಿಂದ ಸರಾಸರಿ ೬೦ ಕೋಟಿ ರೂ.ಗಳ ವಾರ್ಷಿಕ ಆದಾಯವುಂಟಾಗುತ್ತಿದೆ. ಪ್ರತೀ ವರ್ಷ ಸರಾಸರಿ ೫೦ ಲಕ್ಷದಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಮಾತ್ರವಲ್ಲ ಇದು ೧೦,೦೦೦ ಮಂದಿಗೆ ಉದ್ಯೋಗವನ್ನೂ ನೀಡುತ್ತಿದೆ.

You cannot copy contents of this page