ತಿರುವನಂತಪುರ: ಭಾರತದಲ್ಲಿ ಅತೀ ಹೆಚ್ಚು ಪಂಚನಕ್ಷತ್ರ ಹೋಟೆಲ್‌ಗಳಿರುವ ರಾಜ್ಯ ಕೇರಳವಾಗಿದೆ. ಅಪಾರ ಸಂಖ್ಯೆಯಲ್ಲಿ ಬೃಹತ್ ಉದ್ದಿಮೆಗಳು ಇರುವ ಮಹಾರಾಷ್ಟ್ರ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಇರುವುದಕ್ಕಿಂತಲೂ ಹೆಚ್ಚು ಫೈ ಸ್ಟಾರ್ ಹೋಟೆಲ್‌ಗಳು ಕೇರಳದಲ್ಲಿದೆ. ಮಾತ್ರವಲ್ಲ ಫೋರ್ ಮತ್ತು ತ್ರೀ ಸ್ಟಾರ್‌ಗಳು ಹೊಂದಿರುವ ಹೋಟೆಲ್‌ಗಳ ಸಾಲಿನಲ್ಲಿ ಕೇರಳ ಮುಂದಿದೆ. ಪ್ರವಾಸೋದ್ಯಮ ರಂಗದಲ್ಲಿ ಕೇರಳ ಮುಂದಿದ್ದು, ಅದಕ್ಕೆ ಹೊಂದಿಕೊಂಡು ಕೇರಳದಲ್ಲಿ ಪಂಚನಕ್ಷತ್ರ ಹೋಟೆಲ್‌ಗಳ ಸಂಖ್ಯೆ ಹೆಚ್ಚಾಗತೊಡಗಿದೆ.
ಭಾರತದಲ್ಲಿ 761 ಪಂಚನಕ್ಷತ್ರ ಹೋಟೆಲ್‌ಗಳಿದ್ದು, ಇದರಲ್ಲಿ 94 ಹೋಟೆಲ್‌ಗಳು (ಶೇ. 12) ಕೇರಳದಲ್ಲಿವೆ. ಉಳಿದಂತೆ ಮಹಾರಾಷ್ಟ್ರ-86, ಗುಜರಾತ್ 76, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ 1006 ತ್ರೀಸ್ಟಾರ್ ಹೋಟೆಲ್‌ಗಳಿದ್ದು, ಇದರಲ್ಲಿ 607 ಹೋಟೆಲ್ ಕೇರಳದಲ್ಲೇ ಇದೆ. ಅಂದರೆ ಭಾರತದಲ್ಲಿರುವ ಒಟ್ಟು ತ್ರೀಸ್ಟಾರ್ ಹೋಟೆಲ್‌ಗಳ ಪೈಕಿ ಶೇ. 60.34 ಕೇರಳದಲ್ಲಿದೆ. ಗುಜರಾತ್ 120 ಮತ್ತು ಮಹಾರಾಷ್ಟ್ರದಲ್ಲಿ ಇಂತಹ 69 ಹೋಟೆಲ್‌ಗಳಿದ್ದು, ಅವುಗಳು ಕ್ರಮವಾಗಿ ನಂತರದ ಸ್ಥಾನದಲ್ಲಿದೆ.
ದೇಶದಲ್ಲಿ ಒಟ್ಟು 705 ಫೋರ್ ಸ್ಟಾರ್ ಹೋಟೆಲ್‌ಗಳಿದ್ದು, ಅದರಲ್ಲಿ 420 (ಶೇ. 59.57) ಹೋಟೆಲ್‌ಗಳು ಕೇರಳದಲ್ಲೇ ಇದೆ. ಗುಜರಾತ್ (61) ದ್ವಿತೀಯ ಮತ್ತು ಮಹಾರಾಷ್ಟ್ರ (36) ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟಾರೆಯಾಗಿ 2472 ಸ್ಟಾರ್ ಹೋಟೆಲ್‌ಗಳಿದ್ದು, ಇದರಲ್ಲಿ 1121 ಕೇರಳದಲ್ಲೇ ಇದೆ. ಹೋಟೆಲ್‌ಗಳ ಸೌಕರ್ಯಗಳ ಬಗ್ಗೆ ಅವಲೋಕನ ನಡೆಸಿ ಸ್ಟಾರ್ ಶ್ರೇಣಿ ನೀಡುತ್ತಿರುವ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಲೆಕ್ಕಾಚಾರವಾಗಿದೆ ಇದು.