ಮಂಗಳೂರು: ಧರ್ಮಸ್ಥಳ ಬಳಿಯ ಕಾಡಿನಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬರ್ಗಳಾದ ಸಮೀರ್ ಮತ್ತು ಮನಾಫ್ ಸೇರಿದಂತೆ ಹಲವರಿಗೆ ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟೀಸ್ ಜ್ಯಾರಿಗೊಳಿಸಿದೆ. ಆ ಮೂಲಕ ಪ್ರಸ್ತುತ ಪ್ರಕರಣದ ತನಿಖೆಯನ್ನು ಕೇರಳಕ್ಕೆ ವಿಸ್ತರಿಸಲಾಗಿದೆ.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಸುಮಾರು 40ಕ್ಕೂ ಅಧಿಕ ಯೂಟ್ಯೂಬರ್ಗಳು ಸುಮಾರು 500ರಷ್ಟು ಪೇಜರ್ಗಳು ಹಾಗೂ ೬೦ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್ಗಳು ಶಾಮೀಲಾಗಿದ್ದಾರೆಂಬ ಮಾಹಿತಿ ಎಸ್ಐಟಿಗೆ ಲಭಿಸಿದೆ. ಇನ್ನೊಂದೆಡೆ ಕೆಲವು ಯೂಟ್ಯೂಬರ್ಗಳಿಗೆ ವಿದೇಶಿ ಫಂಡಿಂಗ್ ಲಭಿಸಿದೆ ಎಂಬ ಗುಮಾನಿಯ ಹಿನ್ನೆಲೆಯೂ ಜ್ಯಾರಿ ನಿರ್ದೇಶನಾಲಯ ಧಾರ್ಮಿಕ ಕ್ಷೇತ್ರದಲ್ಲಿ ವಿಧ್ವಂಸಕ ಸಂಚು ನಡೆದಿದೆ ಎಂಬ ಆರೋಪ ಉಂಟಾಗಿರುವ ಹಿನ್ನೆಲೆಯಲ್ಲಿ ಇದರ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ತನಿಖೆಗೂ ಹಲವರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ್ದಾರೆ.
ಕೆಲವು ಯೂಟ್ಯೂಬರ್ಗಳು ಎಐ (ಕೃತಕ ಬುದ್ದಿ ಮತ್ತೆ) ಬಳಸಿ ವೀಡಿಯೋವನ್ನು ರಚಿಸಿದ್ದಾರೆಂದೂ, ಇದು ಮಲೆಯಾಳಂ, ತಮಿಳು ಮಾಧ್ಯಮಗಳಲ್ಲಿ ಮಾತ್ರವಲ್ಲ ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲೂ ಪ್ರಕಟಿಸಲಾಗಿತ್ತೆಂಬ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ ಎನ್ನಲಾಗಿದೆ.