ಕಾಸರಗೋಡು: ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ತಲುಪಿಸಿ ಅಲ್ಲಿಂದ ಮರಳುತ್ತಿದ್ದಾಗ ಆಂಬುಲೆನ್ಸ್ನಲ್ಲಿ ಮಾದಕವಸ್ತು ಗಳನ್ನು ಸಾಗಾಟ ನಡೆಸುತ್ತಿದ್ದ ಚಾಲಕ ಸೆರೆಗೀಡಾಗಿದ್ದಾನೆ. ತಳಿಪರಂಬ ಕಂಡಿವಾದುಕಲ್ ಎಂಬಲ್ಲಿ ವಾಸಿಸುವ ಆಂಬುಲೆನ್ಸ್ ಚಾಲಕ ಕಾಯಕ್ಕೂಲ್ ಪುದಿಯ ಪುರ ನಿವಾಸಿ ಕೆ.ಪಿ. ಮುಸ್ತಫ (37) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಓಣಂ ಸ್ಪೆಶಲ್ ಡ್ರೈವ್ನ ಅಂಗವಾಗಿ ತಳಿಪರಂಬ ರೇಂಜ್ ಅಬಕಾರಿ ತಂಡ ಕಂಡಿವಾದುಕಲ್ ಎಂಬಲ್ಲಿ ನಡೆಸಿದ ತಪಾಸಣೆ ವೇಳೆ 430 ಮಿಲ್ಲಿ ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ತಲುಪಿಸಿ ಮರಳುತ್ತಿದ್ದಾಗ ಆರೋಪಿ ಅಲ್ಲಿಂದ ಎಂಡಿಎಂಎ ಖರೀದಿಸಿ ಊರಿಗೆ ತಲುಪಿಸುತ್ತಿ ದ್ದನೆನ್ನಲಾಗಿದೆ. ಊರಿಗೆ ಮರಳಿದ ಬಳಿಕ ಚಿಲ್ಲರೆ ಪ್ಯಾಕೆಟ್ಗಳಾಗಿಸಿ ಅಗತ್ಯವುಳ್ಳವರಿಗೆ ತಲುಪಿಸುತ್ತಿರುವ ಬಗ್ಗೆ ಅಬಕಾರಿ ತಂಡಕ್ಕೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಿಂಗಳುಗಳಿಂದ ಮುಸ್ತಫನ ಮೇಲೆ ನಿಗಾ ಇರಿಸಲಾಗಿತ್ತು. ಇದೀಗ ಎಂಡಿಎಂಎ ಸಹಿತ ಸೆರೆ ಹಿಡಿ ಯಲು ಸಾಧ್ಯವಾಗಿದೆಯೆಂದು ಅಬಕಾರಿ ತಂಡ ತಿಳಿಸಿದೆ. ಕರ್ನಾಟಕದಿಂದ ಕೇರಳಕ್ಕೆ ಮಾದಕವಸ್ತು ಸಾಗಿಸುವ ತಂಡದ ಪ್ರಧಾನ ಕೊಂಡಿ ಈತನಾಗಿ ದ್ದಾನೆಂದೂ ಅಧಿಕಾರಿಗಳು ತಿಳಿಸುತ್ತಿದ್ದಾರೆ.
ರೋಗಿಗಳನ್ನು ಸಾಗಿಸುವ ವಾಹನವಾದುದರಿಂದ ಅಬಕಾರಿ ತಂಡ ಅಥವಾ ಪೊಲೀಸರು ಆಂಬುಲೆನ್ಸ್ ತಪಾಸಣೆ ನಡೆಸಲು ಮುಂದಾಗುತ್ತಿಲ್ಲ. ಇದನ್ನೇ ಸದುಪ ಯೋಗಪಡಿಸಿಕೊಂಡ ಆರೋಪಿ ಮಾದಕವಸ್ತು ಸಾಗಿಸುತ್ತಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.