6 ತಿಂಗಳ ಹಿಂದೆಯಷ್ಟೇ ವಿವಾಹಿತಳಾದ ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಯುವಕ ನೋರ್ವನನ್ನು ಪ್ರೀತಿಸಿ ಆರು ತಿಂಗಳ ಹಿಂದೆಯಷ್ಟೇ  ಆತನನ್ನು ಮದುವೆ ಯಾದ ಯುವತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉದುಮ ಅರಮಂ ಗಾನ ಅಲಿಂಗಾಲ್ ತೊಟ್ಟಿಯಿಲ್ ವೀಟಿಲ್ ರಂಜೀಶ್ ಎಂಬವರ ಪತ್ನಿ ಕೆ. ನಂದನ (20) ಸಾವನ್ನಪ್ಪಿದ ಯುವತಿ. ಪೆರಿಯ ಆಯಂಪಾರ ವಿಲ್ಲಾರಂಪದಿ ನಿವಾಸಿ ಕೆ. ರವಿ- ಸೀನಾ ದಂಪತಿ ಪುತ್ರಿಯಾಗಿರುವ ನಂದನ ರಂಜೀಶ್‌ನನ್ನು ಪ್ರೀತಿಸಿ ಆರು ತಿಂಗಳ ಹಿಂದೆ ಆತನ ಜತೆಗೆ ಹೋಗಿದ್ದಳು. ಬಳಿಕ ಕಳೆದ ಎಪ್ರಿಲ್ ೨೬ರಂದು ಅವರು ದೇವಸ್ಥಾನ ವೊಂದರಲ್ಲಿ ಮದುವೆಯಾಗಿದ್ದರು. ನಂದನ ನಾಪತ್ತೆಯಾದ ಬಗ್ಗೆ ಮನೆಯವರು ನೀಡಿದ ದೂರಿನಂತೆ ಅಂದು ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮದುವೆ ಬಳಿಕ ನಂದನ ಪತಿಯ ಮನೆಯಲ್ಲೇ ವಾಸಿಸುತ್ತಿದ್ದಳು. ನಿನ್ನೆ ಬೆಳಿಗ್ಗೆ ನಂದನ ತಾನು ಸಾಯುವುದಾಗಿ ತಿಳಿಸಿ ತಾಯಿ ಸೀನರಿಗೆ ಸಂದೇಶ ಹಾಗೂ ಕುಣಿಕೆಯ ಫೊಟೋ ಕಳುಹಿಸಿದ್ದಳೆನ್ನಲಾಗಿದೆ. ಅದನ್ನು ಕಂಡ ತಕ್ಷಣ ನಂದನಳ ಪತಿ ಮನೆಯವರಿಗೆ ವಿಷಯ ತಿಳಿಸಲಾಗಿತ್ತು. ಇದರಂತೆ ಮನೆಯವರು ಬೆಡ್‌ರೂಂನ ಬಾಗಿಲು ಬಡಿದರೂ ತೆರೆಯಲಿಲ್ಲ. ಬಳಿಕ ಬಾಗಿಲು ಮುರಿದು ನೋಡಿ ದಾಗ ನಂದನ ಶಾಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಕೆಳಗಿಳಿಸಿ ಆಕೆಯನ್ನು ದೇಳಿಯ ಖಾಸಗಿ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. 

ಮೇಲ್ಪರಂಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮದುವೆಯಾಗುವ ಮೊದಲು ನಂದನ ಕಾಸರಗೋಡಿ ನಲ್ಲಿ ಲ್ಯಾಬ್ ಟೆಕ್ನೀಶ್ಯನ್ ಆಗಿ ದುಡಿಯುತ್ತಿದ್ದಳು. ಮೃತದೇಹವನ್ನು  ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಇದೇ ಸಂದರ್ಭದಲ್ಲಿ ನಂದನಳ ಸಾವಿನ ಬಗ್ಗೆ ಆಕೆಯ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾವಿಗೆ ಕಾರಣವೇನೆಂದು ಇನ್ನೂ ಸ್ಪಷ್ಟಗೊಂಡಿಲ್ಲ. 

You cannot copy contents of this page