ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಭಾಸ್ಕರನಗರದಲ್ಲಿ ರಂಜಿಸಿದ ಓಣಂ ಆಚರಣೆ

ಕುಂಬಳೆ: ಶೆಟ್ಟಿಗದ್ದೆ ಭಾಸ್ಕರನಗರದಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆದ ಓಣಂ ಆಚರಣೆ ಜನಮನ ರಂಜಿಸಿತು. ಸಾವಿರಾರು ಮಂದಿ ಭಾಗವಹಿಸಿದ ಈ ಬೃಹತ್ ಕಾರ್ಯ ಕ್ರಮಕ್ಕೆ ಡಿವೈಎಸ್ಪಿ ಹಾಗೂ  ಸಿನಿಮಾ ನಟನಾದ ಸಿಬಿ ಥೋಮಸ್ ದೀಪ ಬೆಳಗಿಸಿ ಚಾಲನೆ ನೀಡಿದರು.

ತುಳು ಚಿತ್ರನಟಿ ರೂಪಶ್ರೀ ವರ್ಕಾಡಿ, ಕರ್ನಾಟಕ ಜಾನಪದ ಪರಿಷತ್ ದ.ಕ. ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್, ಚಿತ್ರನಟ, ನಿರ್ದೇಶಕ ಅಶ್ವತ್ಥ್, ಪಂಚಾಯತ್ ಸದಸ್ಯೆಯರಾದ ಸುಲೋಚನ, ಶೋಭಾ,  ರಾಜು ಸ್ಟೀಫನ್, ರವಿ ನಾಯ್ಕಾಪು ಮೊದಲಾದವರು ಭಾಗವಹಿಸಿದರು. ಭಾಸ್ಕರನಗರ ನವೋದಯ ಲೈಬ್ರೆರಿ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪಧೆಗಳು ನಡೆಯಿತು. ಮಧ್ಯಾಹ್ನ ಓಣಂ ಭೋಜನ ಏರ್ಪಡಿಸಲಾಯಿತು.

You cannot copy contents of this page