ಮಾರ್ಪನಡ್ಕ: ಬಿಜೆಪಿ ಜಯ ನಗರ 11ನೇ ವಾರ್ಡ್ ಸಮಿತಿ ಸಮಾವೇಶ ಮಾರ್ಪನಡ್ಕ ಪದ್ಮಶ್ರೀ ಸಭಾಂಗಣದಲ್ಲಿ ಜರಗಿತು. ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ. ಎಂ.ಎಲ್ ಉದ್ಘಾಟಿಸಿ ಮಾತನಾಡಿದರು, ಪಕ್ಷದ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಮುಖ್ಯ ಅತಿಥಿಯಾಗಿದ್ದರು. ವಾರ್ಡು ಪ್ರತಿನಿಧಿ ಹರೀಶ ಗೋಸಾಡ ಇವರನ್ನು ವಾರ್ಡ್ ಸಮಿತಿಯ ಪರವಾಗಿ ಅಶ್ವಿನಿ ಎಂ.ಎಲ್.ಸನ್ಮಾನಿಸಿದರು. ವಾಸುದೇವ ಭಟ್ ಚೋಕೆಮೂಲೆ ಅಧ್ಯಕ್ಷತೆ ವಹಿಸಿ ದರು. ಬೂತ್ ಅಧ್ಯಕ್ಷ ನಾರಾಯಣ ನಾಯಕ್, ದಾಮೋದರ ಮಾರ್ಪನಡ್ಕ, ಸೂರ್ಯನಾರಾಯಣ ಮಾಳಿಗೆಮನೆ, ಶಿವಪ್ಪ ನಾಯಕ್, ನಾಗರಾಜ ಭಟ್ ಉಪ್ಪಂಗಳ, ಕೃಷ್ಣ ನಾಯಕ್ ಉಪಸ್ಥಿತ ರಿದ್ದರು. ಸವಿತಾ ಮಾರ್ಪನಡ್ಕ ಸ್ವಾಗತಿಸಿ, ಸುರೇಶ್ ಬಿ ಕೆ ನಿರೂಪಿಸಿ ದರು, ಪ್ರಕಾಶ ಪಾವೂರು ವಂದಿಸಿದರು.
