ಪೆರ್ಮುದೆ: ಇಲ್ಲಿನ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ನಿನ್ನೆ ತೆನೆ ಹಬ್ಬ ಆಚರಿಸಲಾಯಿತು. ಮಾತೆ ಮೇರಿಯ ಗ್ರೋಟೊ ಬಳಿ ತೆನೆಗಳ ಆಶೀರ್ವಚನ ನಡೆಯಿತು. ಬಳಿಕ ಬಾಳೆಮೇರಿಯನ್ನು ಸ್ತುತಿಸಿ ಪುಷ್ಪನಮನ ಸಲ್ಲಿಸಲಾಯಿತು. ಇಗರ್ಜಿಯಲ್ಲಿ ದಿವ್ಯ ಬಲಿಪೂಜೆ ಜರಗಿದ್ದು, ಫಾ| ಹೆರಾಲ್ಡ್ ಡಿಸೋಜಾ, ಫಾ| ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು. ಓಣಂ ಹಬ್ಬದಂಗವಾಗಿ ಭಾರತೀಯ ಕಥೋಲಿಕ ಯುವ ಸಂಚಲನ ಪೆರ್ಮುದೆ ಘಟಕ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಸಿಹಿ ಹಂಚಲಾಯಿತು.
