ಕುಂಬಳೆ: ಕುಂಬಳೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ನಿರ್ಮಾಣದ ವಿರುದ್ಧ ಶಾಸಕರ ನೇತೃತ್ವದಲ್ಲಿ ಕುಂಬಳೆ ಟೋಲ್ ಫ್ಲಾಜಾ ವಿರುದ್ಧ ಕ್ರಿಯಾ ಸಮಿತಿಯ ಮಾರ್ಚ್ ನಡೆಯಿತು. ನಿನ್ನೆ ಬೆಳಿಗ್ಗೆ ಕುಂಬಳೆ ಪೇಟೆಯಿಂದ ಮೆರವಣಿಗೆಯೊಂದಿಗೆ ಮಾರ್ಚ್ ಆರಂಭಗೊಂಡಿತು. ಮಾನದಂಡ ಪಾಲಿಸದೆ ಆರಿಕ್ಕಾಡಿಯಲ್ಲಿ ಟೋಲ್ ಫ್ಲಾಜಾ ನಿರ್ಮಿಸಲಾಗುತ್ತಿದೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ.
ಮೆರವಣಿಗೆ ಟೋಲ್ ಬೂತ್ ಸಮಿಪಕ್ಕೆ ತಲುಪಿದಾಗ ಪೊಲೀಸರು ತಡೆಯೊಡ್ಡಿದರು. ಬ್ಯಾರಿಕೇಡ್‌ಗಳನ್ನು ದಾಟಿ ಮುಷ್ಕರನಿರತರು ಮುಂದೆ ಸ್ವಾಗತಿಸಲೆತ್ನಿಸಿದಾಗ ಜಲಪಿರಂಗಿ ಪ್ರಯೋಗಿಸಿ ಅವರನ್ನು ತಡೆಯಲಾಯಿತು. ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಸಿಪಿಎಂ ನೇತಾರರಾದ ವಿ.ವಿ. ರಮೇಶನ್, ಸಿ.ಎ. ಸುಬೈರ್, ಸೈಫುಲ್ಲ ತಂಙಳ್, ಎ.ಕೆ. ಆರಿಫ್, ಅಶ್ರಫ್ ಕಾರ್ಳೆ ಮೊದಲಾದವರು ಭಾಗವಹಿಸಿದರು.
ಟೋಲ್ ಫ್ಲಾಜಾದ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ. ಪ್ರಸ್ತುತ 20 ಕಿಲೋ ಮೀಟರ್ ದೂರ ಮಾತ್ರ ವಿರುವ ತಲಪಾಡಿಯಲ್ಲಿ ಇನ್ನೊಂದು ಟೋಲ್‌ಗೇಟ್ ಕಾರ್ಯಾಚರಿಸುತ್ತಿ ರುವಾಗ ಕುಂಬಳೆಯಲ್ಲಿ ಸ್ಥಾಪಿಸುತ್ತಿರು ವುದು ಕಾನೂನು ವಿರುದ್ಧವಾಗಿದೆ ಎಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. 1964 ರ ರಾಷ್ಟ್ರೀಯ ಹೆದ್ದಾರಿ ಕಾನೂನು ಪ್ರಕಾರ ಒಂದು ಟೋಲ್ ಬೂತ್‌ನ ಬಳಿಕ 60 ಕಿಲೋ ಮೀಟರ್ ದೂರದಲ್ಲಿ ಇನ್ನೊಂದು ಸ್ಥಾಪಿಸಬಹುದಾಗಿದೆ. ಈ ಕಾನೂನನ್ನು ಇಲ್ಲಿ ಉಲ್ಲಂಘಿಸಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಆದರೆ ಅಗತ್ಯದ ಒಪ್ಪಿಗೆ ಹಾಗೂ ಅಂಗೀಕಾರ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಬೂತ್ ಸ್ಥಾಪಿಸುವುದರಲ್ಲಿ ಕಾನೂನು ಉಲ್ಲಂಘನೆ ಇಲ್ಲವೆಂದು ಹೈಕೋರ್ಟ್ ತಿಳಿಸಿತ್ತು.