ತೃಶೂರು: ಓಣಂ ಹಬ್ಬದ ಅಂಗವಾಗಿ ನಡೆಯುವ ಹುಲಿವೇಷ ತಂಡಗಳಿಗೆ ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಧನ ಸಹಾಯ ಮಂಜೂರು ಮಾಡಿದೆ. ಎಂಟು ತಂಡಗಳಿಗಾಗಿ ಒಟ್ಟು 24 ಲಕ್ಷ ರೂಪಾಯಿಗಳನ್ನು ಕೇಂದ್ರ ಪ್ರವಾಸಿ ಸಚಿವಾಲಯ ನೀಡಲಿದೆ. ಕೇಂದ್ರ ಸಚಿವ ಸುರೇಶ್ಗೋಪಿಯವರ ಪ್ರಯತ್ನ ಫಲವಾಗಿ ಈ ಮೊತ್ತ ಮಂಜೂರು ಮಾಡಲಾಗಿದೆ. ಪ್ರತೀ ತಂಡಕ್ಕೆ ತಲಾ 3 ಲಕ್ಷ ರೂಪಾಯಿ ಲಭಿಸಲಿದೆ.
ಡಿಪಿಪಿಎಚ್ ಸ್ಕೀಂ ಪ್ರಕಾರ ಮೊತ್ತ ನೀಡಲಾಗುವುದು. ಇದಲ್ಲದೆ ದಕ್ಷಿಣ ವಲಯ ಕಲ್ಚರಲ್ ಸೆಂಟರ್ ಹುಲಿ ವೇಷ ತಂಡಗಳಿಗೆ ತಲಾ 1 ಲಕ್ಷ ರೂಪಾಯಿ ನೀಡಲಿದೆಯೆಂದು ಸುರೇಶ್ಗೋಪಿ ತಿಳಿಸಿದ್ದಾಲೆ.