ಉಪ್ಪಳ: ಸೋಂಕಾಲ್‌ನ ಮನೆಯೊಂದರಿಂದ 33.5 ಕಿಲೋ ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಆರೋಪಿ ಸೆರೆಯಾಗಿದ್ದಾನೆ. ಉಪ್ಪಳ ಕುಕ್ಕಾರ್ ನಿವಾಸಿ ಹಮೀದ್ ಅಲಿಯಾಸ್ ಟಿಪ್ಪರ್ ಹಮೀದ್ (32) ಸೆರೆಯಾದ ವ್ಯಕ್ತಿ. ಈತನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಜೂನ್ 1ರಂದು ಕೇಸಿಗೆ ಆಸ್ಪದವಾದ ಘಟನೆ ಜರಗಿತ್ತು. ಉಪ್ಪಳ ಸೋಂಕಾಲ್‌ನ ಎ. ಅಶೋಕ (45)ರ ಮನೆಯ ಮಲಗುವ ಕೊಠಡಿಯ ಮಂಚದಡಿಯಲ್ಲಿ ಗೋಣಿಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಗಾಂಜಾವನ್ನು ಪತ್ತೆಹಚ್ಚಲಾಗಿತ್ತು. ಅಶೋಕನನ್ನು ಸೆರೆ ಹಿಡಿದು ವಿಚಾರಿಸಿದಾಗ ಹಮೀದ್ ಕೂಡಾ ಇದರಲ್ಲಿ ಆರೋಪಿಯಾಗಿ ದ್ದನೆಂದು ತಿಳಿದು ಬಂದಿದ್ದು, ಈತನನ್ನು ಈಗ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
