ಮುಳ್ಳೇರಿಯ: ಅಡೂರಿನಲ್ಲಿ ಯುವತಿಯನ್ನು ಸ್ನೇಹಿತ ಇರಿದು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆ ದಿದೆ. ಘಟನೆಗೆ ಸಂಬಂಧಿಸಿ ಪರಾರಿ ಯಾದ ಯುವಕನ ಪತ್ತೆಗಾಗಿ ಆದೂರು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಡೂರು ಕುರತ್ತಿಮೂಲೆಯ 27ರ ಹರೆಯದ ಯುವತಿಗೆ ಇರಿಯಲಾಗಿದೆ. ನಿನ್ನೆ ಸಂಜೆ ಯುವತಿ ಮನೆಗೆ ನಡೆದು ಹೋಗುತ್ತಿದ್ದ ವೇಳೆ ದಾರಿಯಲ್ಲಿ ಕಾದು ನಿಂತಿದ್ದ ಸ್ನೇಹಿತ ಕರ್ನಾಟಕದ ಮಂಡೆಕೋಲು ನಿವಾಸಿಯಾದ ಪ್ರತಾಪ್ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಇರಿದಿದ್ದಾನೆ. ಯುವತಿ ಬೊಬ್ಬಿಟ್ಟಾಗ ಯುವಕ ಓಡಿ ಪರಾರಿಯಾಗಿ ದ್ದಾನೆ. ಗಾಯಗೊಂಡ ಯುವತಿಯನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಯುವತಿ ವಿವಾಹಿತೆಯಾಗಿದ್ದು, ಪತಿಯಿಂದ ವಿವಾಹ ವಿಚ್ಛೇಧನಕ್ಕೆ ಸಲ್ಲಿಸಿz ಅರ್ಜಿ ಜ್ಯಾರಿಯಲ್ಲಿದೆ. ಇರಿದು ಗಾಯಗೊಳಿಸಿದ ಪ್ರತಾಪ್ ಪತಿಯ ಸ್ನೇಹಿತನೆನ್ನಲಾಗಿದೆ. ಈತ ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಯುವತಿ ಈ ಹಿಂದೆ ಮಹಿಳಾ ಪೊಲೀಸ್ ಹಾಗೂ ಆದೂರು ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಡೆಸಿದ ಮಾತುಕತೆಯಲ್ಲಿ ಇನ್ನು ಕಿರುಕುಳ ನೀಡುವುದಿಲ್ಲವೆಂದು ಯುವಕ ಭರವಸೆ ನೀಡಿದ್ದನೆನ್ನಲಾಗಿದೆ. ಇದರ ಬೆನ್ನಲ್ಲೇ ದಾರಿ ಮಧ್ಯೆ ಯುವತಿಗೆ ಇರಿದು ಕೊಲೆಗೈಯ್ಯಲು ಪ್ರತಾಪ್ ಯತ್ನಿಸಿ ರುವುದಾಗಿ ದೂರಲಾಗಿದೆ.
