ಉಪ್ಪಳ: ಆಲ್ ಕೇರಳ ಪೊಟೋ ಗ್ರಾಫರ್ಸ್ ಅಸೋಶಿಯೇಶನ್ (ಎ.ಕೆ.ಪಿ.ಎ) ಉಪ್ಪಳ ಯೂನಿಟ್ ಇದರ ಸಮ್ಮೇಳನ ಹಾಗೂ ನೂತನ ಪದಾಧಿಕಾರಿಗಳ ರಚನೆ ನಿನ್ನೆ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ಸಂದೇಶ್ ಐಲ್ ದ್ವಜಾರೋಹಣಗೈದು, ಅಧ್ಯಕ್ಷತೆ ವಹಿಸಿದರು. ಸಂಘಟನೆಯ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಉದ್ಘಾಟಿಸಿ ಮಾತ ನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಾಕ್ಷ ವೇಣು.ವಿ.ವಿ, ಜಿಲ್ಲಾ ವೆಲ್ಫೇರ್ ಕನ್ವೀನರ್ ವಿಜಯನ್, ವಲಯ ಕಾರ್ಯದರ್ಶಿ ಸುರೇಶ್ ಆಚಾರ್ಯ, ಕೋಶಾಧಿಕಾರಿ ವೇಣು ಬದಿಯಡ್ಕ, ಉಪ್ಪಳ ಯೂನಿಟ್ ಇನ್‌ಚಾರ್ಜ್ ನವೀನ್ ಕುಂಬಳೆ ಶುಭಾ ಶಂಸನೆಗೈದರು. ಸದಸ್ಯರು ಪ್ರಾರ್ಥನೆ ಹಾಡಿದರು. ಉಪ್ಪಳ ಯೂನಿಟ್ ಕಾರ್ಯದರ್ಶಿ ಬಾಲಕೃಷ್ಣ ಸ್ವಾಗತಿಸಿ, ಕೋಶಾಧಿಕಾರಿ ಮಿಥುನ್.ಜೆ ವಂದಿಸಿದರು.
